Home ಧಾರ್ಮಿಕ ಸುದ್ದಿ ಭೈರಂಜೆ ಶ್ರೀ ಭವಾನಿಶಂಕರ ದೇವಸ್ಥಾನ

ಭೈರಂಜೆ ಶ್ರೀ ಭವಾನಿಶಂಕರ ದೇವಸ್ಥಾನ

ಪ್ರತಿಷ್ಠಾ ವರ್ಧಂತಿ, ಉತ್ಸವ, ಧಾರ್ಮಿಕ ಸಭೆ

1522
0
SHARE

ಹೆಬ್ರಿ: ಇತಿಹಾಸ ಪ್ರಸಿದ್ಧ ಭೈರಂಜೆ ಶ್ರೀ ಭವಾನಿಶಂಕರ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ಉತ್ಸವ ಜ.29ರಿಂದ ಫೆ.1ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ
ನಡೆಯಲಿದೆ.

ಜ.29ರಂದು ಬೆಳಗ್ಗೆ 7ಗಂಟೆಗೆ ಗಣಪತಿ ಪೂಜೆ, 9.30ಕ್ಕೆ ನವಕ ಕಲಶ ಹೋಮ, ರುದ್ರಾಭಿಷೇಕ, ಕಲಶಾಭಿಷೇಕ, ನಾಗದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ಕಲಶಾಭಿಷೇಕ, ಬೆಳಗ್ಗೆ 11.30ಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಆಶೀರ್ವಚನ ಕಾರ್ಯಕ್ರಮ ಬಳಿಕ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಜ.30ರಂದು ಸಂಜೆ 6 ರಿಂದ ನಿಟ್ಟೂರು ಸಾಗರ ನಿವೃತ್ತ ಪ್ರಾಂಶುಪಾಲ ಡಾ| ಶಾಂತರಾಮ ಪ್ರಭು ಅವರಿಂದ ಸಮಾಜದಲ್ಲಿ ಧಾರ್ಮಿಕ ಕ್ಷೇತ್ರಗಳ ಮಹತ್ವ ಕುರಿತು ಧಾರ್ಮಿಕ ಪ್ರವಚನ ನಡೆಯಲಿದ್ದು, ರಾತ್ರಿ 8 ಗಂಟೆಗೆ ಬಲಿ, ಸಿಡಿಮದ್ದು ಪ್ರದರ್ಶನ, ಉತ್ಸವ ನಡೆಯಲಿದೆ.

ಜ. 31ರಂದು ಬೆಳಗ್ಗೆ ರುದ್ರಾಭಿಷೇಕ, ನವಕ ಕಲಶಾಭಿಷೇಕ, ದೀಪಾರಾಧನೆ, ರಾತ್ರಿ ಪೂಜೆ, ಬಲಿ, ಗ್ರಾಮ ಸವಾರಿ, ಉತ್ಸವ ನಡೆಯಲಿದೆ. ಫೆ.1ರಂದು ಸಂಜೆ 5ರಿಂದ ಭೈರಂಜೆ ಶ್ರೀ ಭವಾನೀಶಂಕರ ಮಂಟಪದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ದಿವ್ಯ ಉಪಸ್ಥಿತಿ ಮತ್ತು ಧಾರ್ಮಿಕ ಸಂದೇಶ ನೀಡಲಿದ್ದಾರೆ. ದಿನಂಪತ್ರಿ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here