ನಿಡ್ಪಳ್ಳಿ : ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವ ನ. 22ರಿಂದ 25ರ ವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ನ. 22ರಂದು ಪೂರ್ವಾಹ್ನ ಬಲಿವಾಡು ಶೇಖರಣೆ, ರಾತ್ರಿ ಶ್ರೀ ಮಹಾಗಣಪತಿ ಪೂಜೆ, ನ. 23ರಂದು ಪೂರ್ವಾಹ್ನ ನವಕ ಕಲಶಾಭಿಷೇಕ, ತುಲಾಭಾರ ಸೇವೆ, ಅಪರಾಹ್ನ ಮಹಾಪೂಜೆ, ದೇವರ ಬಲಿ ಉತ್ಸವ, ಪ್ರಸಾದ ವಿತರಣೆ, ಬ್ರಹ್ಮ ಸಮಾರಾಧನೆ, ರಾತ್ರಿ ಮಹಾಪೂಜೆ, ಶ್ರೀ ದೇವರ ಭೂತ ಬಲಿ, ಶ್ರೀ ದೇವರ ಬಲಿ ಹೊರಟು ಕಟ್ಟೆ ಪೂಜೆ, ಬಿಲ್ವಗಿರಿ ಪ್ರವೇಶ, ಕೆರೆ ಉತ್ಸವ ನಡೆಯಲಿವೆ. ನ. 24ರಂದು ಪೂರ್ವಾಹ್ನ 10 ಗಂಟೆಗೆ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ, ಮಂತ್ರಾಕ್ಷತೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ದೇವರ ಮಹಾಪೂಜೆ, ಶ್ರೀ ಜಠಾಧಾರಿ ದೈವದ ಭಂಡಾರ ತೆಗೆದು ಮಹಿಮೆ ನಡೆಯಲಿದೆ.
ಹುಲಿಭೂತ ನೇಮ
ನ. 25ರಂದು ಪೂರ್ವಾಹ್ನ ಧೂಮಾವತಿ ನೇಮ, ಅಪರಾಹ್ನ ಮಹಾಪೂಜೆ, ಹುಲಿಭೂತ ನೇಮ ನಡೆಯಲಿದೆ. ನ. 23ರಂದು ರಾತ್ರಿ 7ರಿಂದ ಶ್ರೀ ಮಹಾಲಿಂಗೇಶ್ವರ ಭಜನ ಸಂಘದವರಿಂದ ಭಜನೆ, ರಾತ್ರಿ ಕಟ್ಟೆಪೂಜೆ ಸಂದರ್ಭದಲ್ಲಿ ಬೆಟ್ಟಂಪಾಡಿ ಬೆಡಿ, ನ. 24ರಂದು ರಾತ್ರಿ 9ರಿಂದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಆನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಹಾಗೂ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ತಿಳಿಸಿದ್ದಾರೆ.