ಬಡಗನ್ನೂರು: ಪಾಪೆಮಜಲು ಬೇಂಗತ್ತಡ್ಕ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೇರುಗಳ ನೇಮ ಜರಗಿತು.
ಬೆಳಗ್ಗೆ 9ಕ್ಕೆ ಗಣಪತಿ ಹೋಮ, ಬ್ರಹ್ಮದೇವರ ತಂಬಿಲ, ರಾತ್ರಿ 9.30ಕ್ಕೆ ಅನ್ನ ಸಂತರ್ಪಣೆ ನಡೆಯಿತು. 10.30ಕ್ಕೆ ಕೋಟಿ ಚೆನ್ನಯರು ಗರಡಿ ಇಳಿದು, 1 ಗಂಟೆಗೆ ಮಾಣಿಮಾಲೆ ಇಳಿಯಿತು. ಮುಂಜಾನೆ 4 ಗಂಟೆಗೆ ಕೋಟಿ ಚೆನ್ನಯರ ದರ್ಶನ ಪಾತ್ರಿಗಳ ಸೇಟ್, 5ಕ್ಕೆ ಬೈದೇರುಗಳ ಸೇಟ್, ಗಂಧ ಪ್ರಸಾದ ವಿತರಣೆ ನಡೆಯಿತು. ಮೊಕ್ತೇಸರ ಮುಕುಂದ ಶಾಂತಿವನ ನೇತೃತ್ವ ವಹಿಸಿದ್ದರು.
ಶಾಸಕ ಸಂಜೀವ ಮಠಂದೂರು, ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು, ಗೆಜ್ಜಗಿರಿ ಯಜಮಾನ ಶ್ರೀಧರ ಪೂಜಾರಿ, ಕಿನ್ನಿಮಜಲು ಗರಡಿಯ ಮೊಕ್ತೇಸರ ಗಿರಿಯಪ್ಪ ಪೂಜಾರಿ, ಕುಕ್ಕುತ್ತಡಿ ಗರಡಿಯ ಮೋಕ್ತೇಸರ ಜಯರಾಮ ಪೂಜಾರಿ ಉಪಸ್ಥಿತರಿದ್ದರು. ಹರಿ ಭಟ್ ಕುತ್ಯಾಡಿ, ರಾಜೀವ ರೈ ಕುತ್ಯಾಡಿ, ಅಮ್ಮಣ್ಣ ರೈ ಪಾಪೆಮಜಲು, ಮನೋಜ್ ರೈ ಪಾಪೆಮಜಲು,ತಿಲಕ್ ರೈ ಕುತ್ಯಾಡಿ, ಸಚಿನ್ ರೈ ಪಾಪೆಮಜಲು, ಸಂತೋಷ್ ರೈ ಕೈಕಾರ, ಕೇಶವ ಶಾಂತಿವನ, ನಾರಾಯಣ ಶಾಂತಿವನ, ಗಂಗಾಧರ ಶಾಂತಿವನ, ಚಂದ್ರಕಾಂತ ಶಾಂತಿವನ, ತ್ರಿವೇಣಿ ಪೆರವೋಡಿ, ನಿತೀಶ್ ಕುಮಾರ್ ಶಾಂತಿವನ, ಪ್ರವೀಣ ಪಲ್ಲತ್ತಾರು, ಶಕುಂತಳಾ, ಉಮೇಶ ಬೆಂಗತ್ತಡ್ಕ, ಉಮಾನಾಥ ಮಂಗಳೂರು, ಗಿರೀಶ್ ಶಾಂತಿವನ, ಅವಿನಾಶ್ ಮೈಸೂರು, ಜಗದೀಶ್ ಪೆರಿಗೇರಿ, ಅಶೋಕ್ ಶಾಂತಿವನ, ಪ್ರದೀಪ್ ಶಾಂತಿವನ, ಪ್ರಮೋದ್ ಕುಂಬ್ರ, ರಾಘವ ಪೂಜಾರಿ ಮರತ್ತಮೂಲೆ, ದಿನೇಶ್ ಮರತ್ತಮೂಲೆ, ಗೌರಿ ಶಂಕರ, ಪುಷ್ಪರಾಜ್ ಶಾಂತಿವನ, ನಾರಾಯಣ ಪೂಜಾರಿ ಕುರಿಕ್ಕಾರ ಪಾಲ್ಗೊಂಡಿದ್ದರು.