ಬೆಳ್ತಂಗಡಿ : ಲಾೖಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಮುಂಜಾನೆ 6ಕ್ಕೆ ಸಹಸ್ರಾರು ಹಣತೆ ದೀಪಗಳಿಂದ ಶ್ರೀ ದೇವರ ವಿಶ್ವರೂಪ ದರ್ಶನ ಜರಗಿತು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾತಃ ಕಾಲ 4.45ಕ್ಕೆ ದೇವಸ್ಥಾನ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ದೇವರ ಗರ್ಭಗೃಹದಿಂದ ಜ್ಯೋತಿ ನೀಡುವ ಮೂಲಕ ಆಡಳಿತ ಮಂಡಳಿ ಮೊಕ್ತೇಸರ ಡಾ| ಸುಧೀರ್ ಪ್ರಭು ದೀಪಪ್ರಜ್ವಲನಗೊಳಿಸಿದರು.
ನ. 8ರಂದು ಸಂಜೆ 6.45ಕ್ಕೆ ಏಕಾಹ ಭಜನೆ ಮೊದಲ್ಗೊಂಡು ಸುಮಾರು 20 ತಂಡಗಳಿಂದ ನಿರಂತರ ಭಜನೆ ನೆರವೇರಿತು. ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಶನಿವಾರ ಪ್ರಾತಃಕಾಲ ಏಕಕಾಲದಲ್ಲಿ ದೀಪ ಬೆಳಗಲಾಯಿತು. ದೇಗುಲದ ಸುತ್ತ 5,000ಕ್ಕೂ ಹೆಚ್ಚು ಹಣತೆ ಬೆಳಗಲಾಯಿತು. ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು.
ಟ್ರಸ್ಟಿನ ಕಾರ್ಯದರ್ಶಿ ಅರವಿಂದ ಭಟ್, ಮಾಜಿ ಆಡಳಿತ ಅಧ್ಯಕ್ಷ ಬಿ. ರಾಮ್ದಾಸ್ ಪೈ, ಸದಸ್ಯರಾದ ಸುದೇಶ್ ಕಾಮತ್, ನಾರಾಯಣ ಪೈ, ಬಿ.ಎಚ್. ರಾಮದಾಸ ಪೈ, ಬಿ. ವಸಂತ ಮಾಧವ ಪ್ರಭು, ಬಿ. ಗಣೇಶ್ ಭಟ್, ಗೋಕುಲ್ ದಾಸ್ ಭಂಡಾರ್ಕರ್ ಮತ್ತಿತರ ಮುಖ್ಯಸ್ಥರು, ಭಕ್ತರು ಭಾಗವಹಿಸಿದರು.