Home ಧಾರ್ಮಿಕ ಕಾರ್ಯಕ್ರಮ ಪತ್ತನಾಜೆ ಉತ್ಸವ ಸಮಾಪನ, ವಿಶೇಷ ಪೂಜೆ

ಪತ್ತನಾಜೆ ಉತ್ಸವ ಸಮಾಪನ, ವಿಶೇಷ ಪೂಜೆ

ಧರ್ಮಸ್ಥಳ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯ

1073
0
SHARE

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ (ಹತ್ತನಾಜೆ) ಉತ್ಸವವು ಭಕ್ತಿ ಸಂಭ್ರಮದಿಂದ ಶನಿವಾರ ರಾತ್ರಿ ಸಮಾಪನಗೊಂಡಿತು.

ಶ್ರೀಕ್ಷೇತ್ರ ಧರ್ಮಸ್ಥಳ ಮೇಳದ ಪ್ರಸಕ್ತ ಸಾಲಿನ ತಿರುಗಾಟ ಕೊನೆಗೊಂಡು ಮೇ 25ರಂದು ಸಂಜೆ ಮೇಳದ ಶ್ರೀ ಮಹಾಗಣಪತಿಯನ್ನು ಶ್ರೀ ಮಂಜುಕೃಪಾದಿಂದ ವೈಭವದ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.

ಕೇರಳದ ಚೆಂಡೆ ಮೇಳ, ವಾದ್ಯ, ಶಂಖ, ಜಾಗಟೆ, ಕ್ಷೇತ್ರದ ಬಿರುದಾವಳಿಗಳು, ಆನೆಗಳು, ಬಸವ, ಹೂವಿನ ಕೋಲು ಮೆರವಣಿಗೆಯ ಶೋಭೆ ಹೆಚ್ಚಿಸಿತು.

ವಿಶೇಷ ಪೂಜೆ
ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮಹಾ ಗಣಪತಿ ಉತ್ಸವ ಸಾಗಿ ಛತ್ರ ಮಹಾಗಣಪತಿ ದೇಸ್ಥಾನಕ್ಕೆ ಪ್ರವೇಶಿಸಿತು. ಛತ್ರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್‌, ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಮತ್ತು ಕ್ಷೇತ್ರದ ಸಿಬಂದಿ, ಭಕ್ತರು ಭಾಗವಹಿಸಿದರು.

ರಾತ್ರಿ ವಿಶೇಷ ಉತ್ಸವದೊಂದಿಗೆ ವಾರ್ಷಿಕ ಉತ್ಸವ, ವಿಶೇಷಗಳು ಸಮಾಪನಗೊಂಡವು.

LEAVE A REPLY

Please enter your comment!
Please enter your name here