ಬೆಳ್ತಂಗಡಿ : ವಾರ್ಷಿಕ ಜಾತ್ರೆ, ಮಹೋತ್ಸವಗಳು ಪ್ರೀತಿ, ಸಾಮರಸ್ಯ, ಬಾಂಧವ್ಯಕ್ಕೆ ಪೂರಕವಾಗಿರಬೇಕು. ಯೇಸು ಸ್ವಾಮಿಯ ಪವಿತ್ರ ಹೃದಯ ಪ್ರೀತಿಯ ಪ್ರತೀಕವಾಗಿದೆ. ನಾವೆಲ್ಲರೂ ಒಬ್ಬರಿಗೊಬ್ಬರು ಪ್ರೀತಿಸುವಂತಾಗಬೇಕು ಎಂದು ಜೆಪ್ಪು ಸಂತ ಜೋಸೆಪ್ಸ್ ಸೆಮಿನರಿಯ ರೆಕ್ಟರ್ ವಂ| ರೊನಾಲ್ಡ್ ಸೆರಾವೊ ಆಶೀರ್ವದಿಸಿದರು.
ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ನ ವಾರ್ಷಿಕೋತ್ಸವದ ಪವಿತ್ರ ಬಲಿಪೂಜೆಯ ಪ್ರವಚನ ನೀಡಿದರು. ಈ ಹಬ್ಬಕ್ಕೆ ಪೂರ್ವ ಭಾವಿಯಾಗಿ ಪವಿತ್ರ ಪರಮ ಸಂಸ್ಕಾರದ ಮೆರವಣಿಗೆ, ಪವಾಡ ಪ್ರತಿಮೆಯೊಂದಿಗೆ ಮೊಂಬತ್ತಿ ಮೆರವಣಿಗೆ, ದೇವರ ಸ್ತುತಿ, ಗಾನಗಳ ವೈಭವ, ಧ್ಯಾನ ಗುಹೆಯಲ್ಲಿ ಪ್ರಾರ್ಥನೆ ಹೀಗೆ ವಿವಿಧ ವಿಧಿ ವಿಧಾನಗಳ ಮೂಲಕ ಸಂಭ್ರಮಾಚರಣೆ ನಡೆಸಲಾಗಿದೆ.
ಮಂಗಳೂರು, ಉಡುಪಿ ಧರ್ಮ ಪ್ರಾಂತದ 47 ಧರ್ಮಗುರುಗಳು, ಧರ್ಮ ಭಗಿಣಿಯರು ಭಾಗಿಯಾಗಿದ್ದರು. ಚರ್ಚ್ನ ಪ್ರಧಾನ ಧರ್ಮಗುರು ವಂ| ಬಾಜಿಲ್ ವಾಸ್, ಸಹಾಯಕ ಧರ್ಮಗುರುಗಳಾದ ವಂ| ಸ್ಟಾನಿ ಪಿಂಟೋ, ವಂ| ಸ್ವಾಮಿ ರೆನಾಲ್ಡ್ ಸೆರಾವೊ, ಪ್ರಾಂಶುಪಾಲರಾದ ವಂ| ಜೆರೋಮ್ ಡಿ’ಸೋಜಾ, ಉಪಾಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ಲಿಯೋ ರೋಡ್ರಿಗಸ್ ಮೊದಲಾದವರು ಭಾಗವಹಿಸಿದ್ದರು.