Home ಧಾರ್ಮಿಕ ಸುದ್ದಿ ಹೆಗ್ಗಡೆ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವ

ಹೆಗ್ಗಡೆ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವ

1139
0
SHARE

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಗುರುವಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 52ನೇ ವರ್ಧಂತ್ಯುತ್ಸವದ ಸಂಭ್ರಮ-ಸಡಗರ ಮನೆಮಾಡಿತ್ತು. ದೇವಸ್ಥಾನ, ಹೆಗ್ಗಡೆಯವರ ಬೀಡು, ವಸತಿ ಛತ್ರಗಳನ್ನು ಪ್ರಾಕೃತಿಕ ಪರಿಕರಗಳಿಂದ ಅಲಂಕರಿಸಲಾಗಿತ್ತು.

ದೇವಸ್ಥಾನವನ್ನು ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಸ್ಥಾನ, ಬಸದಿಯಲ್ಲಿ ವಿಶೇಷ ಪೂಜೆ ನಡೆಯಿತು. ಧರ್ಮಸ್ಥಳದ ಭಕ್ತರು, ಅಭಿಮಾನಿಗಳು ಹಾಗೂ ಆಪ್ತರು ಹೆಗ್ಗಡೆಯವರನ್ನು ಭೇಟಿಯಾಗಿ ಫ‌ಲ-ಪುಷ್ಪ ಅರ್ಪಿಸಿ ಗೌರವಾರ್ಪಣೆ ಮಾಡಿದರು.

ದೇಗುಲದ ನೌಕರ ವೃಂದದವರ ಛದ್ಮವೇಷ ಸ್ಪರ್ಧೆ ಕಣ್ಮನ ಸೆಳೆಯಿತು. ಗೌರವಾರ್ಪಣೆ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ಶಾಸಕ ಹರೀಶ್‌ ಪೂಂಜ, ಮಾಣಿಲದ ಮೋಹನದಾಸ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಕನ್ನಡ ಸಾಹಿತ್ಯ ಪರಿಷತ್‌ ದ.ಕ. ಜಿಲ್ಲಾ
ಘಟಕದ ಅಧ್ಯಕ್ಷ ಕೆ. ಪ್ರದೀಪ್‌ ಕುಮಾರ್‌ ಕಲ್ಕೂರ, ಹಂಪಿ ಕನ್ನಡ ವಿ.ವಿ. ಮಾಜಿ ಕುಲಪತಿ ಡಾ| ವಿವೇಕ ರೈ, ಹಾವೇರಿ ಜಾನಪದ ವಿ.ವಿ. ಮಾಜಿ ಕುಲಪತಿ ಡಾ|
ಕೆ. ಚಿನ್ನಪ್ಪ ಗೌಡ, ಡಾ| ತಾಳ್ತಜೆ ವಸಂತ ಕುಮಾರ್‌, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು ಮತ್ತಿತರರು ಗೌರವ ಸಲ್ಲಿಸಿದರು

LEAVE A REPLY

Please enter your comment!
Please enter your name here