Home ಧಾರ್ಮಿಕ ಸುದ್ದಿ ನ. 22-26: ಧರ್ಮಸ್ಥಳ ಲಕ್ಷದೀಪೋತ್ಸವ

ನ. 22-26: ಧರ್ಮಸ್ಥಳ ಲಕ್ಷದೀಪೋತ್ಸವ

1480
0
SHARE

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನ. 22ರಿಂದ 27ರ ವರೆಗೆ ನಡೆಯಲಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ನ. 25ರಂದು ಸಂಜೆ 5ರಿಂದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ನಿಕಟಪೂರ್ವ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಉದ್ಘಾಟಿಸುವರು.

ನ. 26ರಂದು ಸಂಜೆ 5ರಿಂದ ಅಮೃತ ವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನವನ್ನು ಡಿಸಿಎಂ ಡಾ| ಅಶ್ವತ್ಥನಾರಾಯಣ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಡಾ| ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸುವರು.

ನ. 22ರಿಂದ 25ರ ವರೆಗೆ ಪ್ರತಿ ದಿನ ಸಂಜೆ 6ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ನ. 24ರಂದು ಸಂಜೆ 3ರಿಂದ ಅಮೃತವರ್ಷಿಣಿ ಸಭಾ ಭವನದಲ್ಲಿ ಲಲಿತಕಲಾ ಗೋಷ್ಠಿ, ಸಂಜೆ 5.30ರಿಂದ ನೃತ್ಯ, 7ರಿಂದ ಸಂಗೀತ, 8.30ರಿಂದ ನೃತ್ಯ ವೈವಿಧ್ಯ ನಡೆಯಲಿದೆ.

ವಿವಿಧ ಉತ್ಸವಗಳು
ದೀಪೋತ್ಸವ ಪ್ರಯುಕ್ತ ಕ್ಷೇತ್ರದಲ್ಲಿ ನ. 22ರಂದು ಹೊಸಕಟ್ಟೆ ಉತ್ಸವ, 23ರಂದು ಕೆರೆಕಟ್ಟೆ ಉತ್ಸವ, 24ರಂದು ಲಲಿತೋದ್ಯಾನ ಉತ್ಸವ, 25ರಂದು ಕಂಚಿಮಾರುಕಟ್ಟೆ ಉತ್ಸವ, 26ರಂದು ಗೌರಿಮಾರುಕಟ್ಟೆ ಉತ್ಸವ, 27ರಂದು ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನೆರವೇರಲಿದೆ.

LEAVE A REPLY

Please enter your comment!
Please enter your name here