Home ಧಾರ್ಮಿಕ ಸುದ್ದಿ ಬೆಳ್ತಂಗಡಿ: 13ನೇ ಶತಮಾನದ ನಾಗ ಶಿಲೆ ಪತ್ತೆ

ಬೆಳ್ತಂಗಡಿ: 13ನೇ ಶತಮಾನದ ನಾಗ ಶಿಲೆ ಪತ್ತೆ

26
0
SHARE

ಬೆಳ್ತಂಗಡಿ:  ತಾಲೂಕಿನ ಸೋಣಂದೂರು ಗ್ರಾಮದಲ್ಲಿ, ಶಿವಣ್ಣ ಗೌಡ ಎಂಬವರು ಖರೀದಿಸಿದ ಜಾಗದಲ್ಲಿ ಅಪರೂಪದ 13 ನೇ ಶತಮಾನ ನಾಗ ಶಿಲೆ ಪತ್ತೆಯಾಗಿದೆ.

ಜಾಗದಲ್ಲಿದ್ದ ನಾಗಬನವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಜ್ಯೋತಿಷಿ ಮಂಜುನಾಥ ಭಟ್ ಅಂತರ ಅವರ ಮಾರ್ಗದರ್ಶನದಲ್ಲಿ ಆರೂಢ ಪ್ರಶ್ನೆ ಇರಿಸಲಾಗಿತ್ತು. ಬನವಿರುವ ಸ್ಥಳವನ್ನು ಉತ್ಖನನ ಮಾಡಿದಾಗ 11 ನಾಗ ಶಿಲೆಗಳು ದೊರೆತಿದ್ದು ತುಂಬಾ ಅಪರೂಪವೆನಿಸಿವೆ. ನಾಗ ಯಕ್ಷ ಮತ್ತು ನಾಗ ಯಕ್ಷಿ ಶಿಲೆಗಳು, ಮರಿ ನಾಗನ ಸಹಿತವಾದ ಐದು ಹೆಡೆಯ ನಾಗಶಿಲೆ ಕಂಡು ಬಂದಿದೆ.

ಹಿಂದಿನ ಕಾಲದಲ್ಲಿ ಈ ಜಾಗದಲ್ಲಿ ಸಂತತಿಗೋಸ್ಕರ, ವಿವಾಹ ಸಿದ್ಧಿಗೋಸ್ಕರ ನಾಗಾರಾಧನೆ ನಡೆಯುತ್ತಿದ್ದಿರಬಹುದು ಎನ್ನುವುದಕ್ಕೆ ದ್ಯೋತಕವಾಗಿ ಯಕ್ಷ ಯಕ್ಷಿ ಜೋಡಿ, ಮರಿ ನಾಗರ ಶಿಲೆ ಕಂಡುಬಂದಿದೆ.

ಪುನರ್ ಪ್ರತಿಷ್ಠಾಪನೆಗಾಗಿ, ನೂತನ ನಾಗಶಿಲೆ ತಯಾರಿಗೆ ಊರಿನ ಪರಿಣತ ಶಿಲ್ಪಿಯವರನ್ನು ಭೇಟಿಯಾದಾಗ ಈ ನಾಗ ಶಿಲೆಗಳು 13ನೇ ಶತಮಾನದ ಕಾಲದ್ದು ಎಂದು ಶಿಲ್ಪಿ ಅಭಿಪ್ರಾಯಟ್ಟಿದ್ದಾರೆ.

ಈ ನಾಗಬನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಪುರುಷೋತ್ತಮ ಶೆಟ್ಟಿ ನೇತೃತ್ವದಲ್ಲಿ ನಾಗಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮೇ ತಿಂಗಳಿನಲ್ಲಿ ನಡೆಯಲಿದೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here