ಬೆಳ್ಮಣ್: ಈ ಹಿಂದೆ ಮಹಾ ಭಾರತದ ಕಾಲದಲ್ಲಿ ಒಂದೇ ತಿಂಗಳಲ್ಲಿ ಎರಡು ಚಂದ್ರಗ್ರಹಣಗಳು ಬಂದಿದ್ದು ಅದು ಈ ವರ್ಷ ಮರುಕಳಿಸಿ ಒಂದೇ ತಿಂಗಳೊಳಗಾಗಿ ಎರಡು ಗ್ರಹಣಗಳು ಬಾಧಿಸಲಿವೆೆ. ಆದ್ದರಿಂದ ಲೋಕ ಸುಭಿಕ್ಷೆಯ ಜತೆ ಮಳೆಗಾಗಿ ರುದ್ರ ಸೋಮನಾಥೇಶ್ವರ ದೇವರಿಗೆ ವಿಶೇಷ ಪೂಜೆಯೊಂದಿಗೆ ಸೀಯಾಳಾಭಿಷೇಕ ನಡೆಯುತ್ತಿದೆ ಎಂದು ಬೋಳ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇಗುಲದ ಅರ್ಚಕ ಶ್ರೀನಿವಾಸ ಭಟ್ ಹೇಳಿದರು.
ರವಿವಾರ ದೇಗುಲದಲ್ಲಿ ಲೋಕ ಸುಭಿಕ್ಷೆ ಹಾಗೂ ಮಳೆಗಾಗಿ ಭಕ್ತರ ಮೂಲಕ ವಿಶೇಷ ಪೂಜೆ ಹಾಗೂ ಸೀಯಾಳಾಭಿಷೇಕ ನಡೆಸಿ ಪ್ರಾರ್ಥಿಸಿದರು.
500ಕ್ಕೂ ಮಿಕ್ಕಿ ಸೀಯಾಳದ ಅಭಿಷೇಕ ನಡೆಯಿತು. ಈ ಸಂದರ್ಭ ಹಾಗೂ ಬಳಿಕ ಭಾರೀ ಮಳೆಯಾಯಿತು. ಅರ್ಚಕ ಹರೀಶ್ ಭಟ್, ಬೋಳ ಪರಾರಿ ವಿಕಾಸ್ ಶೆಟ್ಟಿ, ಮಾರಗುತ್ತು ಸುಭಾಸ್ ಶೆಟ್ಟಿ, ಪಾಲಿಂಗೇರಿಪರಾರಿ ಬಾಲಕೃಷ್ಣ ಶೆಟ್ಟಿ, ಬಾಲಾಜಿ ಶೆಟ್ಟಿ, ಬೋಳ ಪರಾರಿ ವಿದ್ಯಾಶೇಖರ ಶೆಟ್ಟಿ ಹಾಗೂ ಭಕ್ತರು ಉಪಸ್ಥಿತರಿದ್ದರು.