Home ಧಾರ್ಮಿಕ ಸುದ್ದಿ ಮಂಜರಪಲ್ಕೆ: ಪಕಲ ಪರ್ಬದ ಸಂಭ್ರಮ

ಮಂಜರಪಲ್ಕೆ: ಪಕಲ ಪರ್ಬದ ಸಂಭ್ರಮ

126
0
SHARE

ಬೆಳ್ಮಣ್‌: ಪವಾಡಪುರುಷ ಸಂತ ಅಂತೋನಿ ಅವರ ಪುಣ್ಯಕ್ಷೇತ್ರ ಪಕಲ-ಮಂಜರಪಲ್ಕೆಯ ವಾರ್ಷಿಕ ಮಹೋತ್ಸವ (ಪಕಲ ಪರ್ಬ) ಗುರು ವಾರ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ಶಿರ್ವ ವಲಯದ ಧರ್ಮಗುರು ವಂ| ಸ್ವಾಮಿ ಡೆನ್ನಿಸ್‌ ಡೆ’ಸಾ ಅವರ ನೇತೃತ್ವದಲ್ಲಿ ಸಂಭ್ರಮದ ಬಲಿಪೂಜೆ ನಡೆಯಿತು. ಇದೇ ಸಂದರ್ಭ ವಂ| ಸ್ವಾಮಿ ರಾಜೇಶ್‌ ಪ್ರವೀಣ್‌ ಡಿ’ಸೋಜಾ ಪ್ರಸಂಗ ಪ್ರಸ್ತುತಗೊಳಿಸಿದರು. ಬೆಳ್ಮಣ್‌ ಸಂತ ಜೋಸೆಫರ ಚರ್ಚ್‌ನ ಪ್ರಧಾನ ಧರ್ಮ ಗುರು ವಂ| ಎಡ್ವಿನ್‌ ಡಿ’ಸೋಜಾ, ಪಾಲನಾ ಮಂಡಳಿಯ ಉಪಾಧ್ಯಕ್ಷ ಆಲ್ವಿನ್‌ ಅಗೇರಾ, ಕಾರ್ಯದರ್ಶಿ ಪಾವುಸ್ತೀನ್‌ ಡಿ’ಸೋಜಾ, ಪಕಲ ಪುಣ್ಯ ಕ್ಷೇತ್ರದ ಉಪಾಧ್ಯಕ್ಷ ಗ್ರೆಗರಿ ಡಿ’ಸೋಜಾ, ಕಾರ್ಯದರ್ಶಿ ಗ್ರೆಟ್ಟಾ ಡಿ’ಸೋಜಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here