Home ಧಾರ್ಮಿಕ ಸುದ್ದಿ ಬೊಳ್ಳಿ ಬೊಟ್ಟು ದೈವ ಸಾನ್ನಿಧ್ಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಬೊಳ್ಳಿ ಬೊಟ್ಟು ದೈವ ಸಾನ್ನಿಧ್ಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

1387
0
SHARE

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಕೂರ್ಯಾಳ ಗ್ರಾಮದ ಮೇಗಿನ ಕೂರ್ಯಾಳ ದಲ್ಲಿ ಪುನರ್‌ ನಿರ್ಮಾಣಗೊಳ್ಳಲಿರುವ ಬೊಳ್ಳಿ ಬೊಟ್ಟು ದೈವ ಸಾನ್ನಿಧ್ಯದಲ್ಲಿ ಗಣಪತಿ ಹೋಮ,
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಆಶ್ಲೇಷಾ ಪೂಜೆ ಜರಗಿತು.

ನಿವೃತ್ತ ಮುಖ್ಯ ಶಿಕ್ಷಕ, ಸಮಿತಿ ಗೌರವಾಧ್ಯಕ್ಷ, ವೇದಾನಂದ ಕಾರಂತ ಅವರು ದೈವಸ್ಥಾನ ಪುನರ್‌ ರ್ನಿರ್ಮಾಣ ಪ್ರಯುಕ್ತ ಮುಂದೆ ಅಷ್ಟಮಂಗಳ ಪ್ರಶ್ನೆ, ದೈವ ಸಾನ್ನಿಧ್ಯ ಹಾಗೂ ಜೀರ್ಣೋದ್ಧಾರದಂತಹ ಪುಣ್ಯ ಕಾರ್ಯಗಳು ನೇರವೇರಲಿದ್ದು, ಆ ಪ್ರಯುಕ್ತ ಭಕ್ತರು ಸಹಕಾರ ನೀಡಬೇಕೆಂದು ವಿನಂತಿಸಿದರು.
ಅಧ್ಯಕ್ಷ ಗಣೇಶ ಆಚಾರ್ಯ, ಕೋಶಾಧಿಕಾರಿ ಪುರಂದರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here