ಬೆಳ್ಳಾರೆ: ಆಧ್ಯಾತ್ಮಿಕ ವಿಚಾರವನ್ನು ಮೈಗೂಡಿಸಿಕೊಂಡರೆ ಜೀವನ ಪಾವನವಾಗುತ್ತದೆ. ದೇವರ ನಿರಂತರ ಸ್ಮರಣೆಯಿಂದ ಕಷ್ಟಗಳು ದೂರವಾಗಿ ನೆಮ್ಮದಿ ಸಿಗುತ್ತದೆ ಎಂದು ಕರಿಂಜೆ ಶ್ರೀ ಶಕ್ತಿಗುರು ಮಠದ ಮುಕ್ತಾನಂದ ಸ್ವಾಮೀಜಿ ನುಡಿದರು.
ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಕಲ್ಲೇರಿ, ಎಣ್ಮೂರು ಆಶ್ರಯದಲ್ಲಿ ನಡೆದ 15ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಧಾಮೀಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಉಡುಪಿಯ ಸಹನಾ ಕುಂದರ್ ಧಾರ್ಮಿಕ ಉಪನ್ಯಾಸ ನೀಡಿದರು.
ಸಮಿತಿಯ ಅಧ್ಯಕ್ಷ ರಮೇಶ್ ಕೆ.ಕೆ. ಅಧ್ಯಕ್ಷತೆ ವಹಿಸಿದ್ದರು. ಮುರುಳ್ಯ ಶ್ರೀ ರಾಮಾಂಜನೇಯ ಭಜನ ಮಂದಿರದ ಅಧ್ಯಕ್ಷ ವಸಂತ ನಡುಬೈಲು, ಎಣ್ಮೂರು ಗ್ರಾ.ಪಂ. ಸದಸ್ಯ ರಘುಪ್ರಸಾದ್ ಶೆಟ್ಟಿ, ನಿಂತಿಕಲ್ಲು ಕೆ.ಎಸ್. ಗೌಡ ವಿದ್ಯಾ ಸಂಸ್ಥೆಯ ನಿರ್ದೇಶಕ ಕುಮಾರಸ್ವಾಮಿ ಕೆ.ಎಸ್., ಪದ್ಮಾವತಿ ರೈ ಕುಳಾಯಿತೋಡಿ, ಪ್ರಧಾನ ಕಾರ್ಯದರ್ಶಿ ವಸಂತ ರೈ ಕಲ್ಲೇರಿ ಉಪಸ್ಥಿತರಿದ್ದರು.
ಪುರಸ್ಕಾರ
ಅಂಗನವಾಡಿ ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ, ಸಾರ್ವಜನಿಕರಿಗೆ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳು ನಡೆದವು. 2018-19ನೇ ಸಾಲಿನಲ್ಲಿ ಏಳನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಚಿದಾನಂದ ಕಲ್ಲೇರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ತಿಕ್ ರೈ ಕಲ್ಲೇರಿ ಸ್ವಾಗತಿಸಿ, ಪ್ರದೀಪ್ ರೈ ವಂದಿಸಿದರು. ರಾಜೇಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಅರುಣ್ ಬಲ್ಕಾಡಿ ಸಹಕರಿಸಿದರು.
‘ಪುಣ್ಣಮೆದ ಪೊಣ್ಣು’
ರಾತ್ರಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯವರಿಂದ ‘ಪುಣ್ಣಮೆದ ಪೊಣ್ಣು’ ತುಳು ಯಕ್ಷಗಾನ ಬಯಲಾಟ ನಡೆಯಿತು.