Home ಧಾರ್ಮಿಕ ಸುದ್ದಿ ಬೆಳ್ಳಾರೆ ಮುಖಾಂ ಉರೂಸ್‌, ಧಾರ್ಮಿಕ ಸಭೆ

ಬೆಳ್ಳಾರೆ ಮುಖಾಂ ಉರೂಸ್‌, ಧಾರ್ಮಿಕ ಸಭೆ

ಅವುಲಿಯಾಗಳ ಸ್ಮರಣೆ ಪುಣ್ಯ ಕರ್ಮ: ಮುತ್ತುಕೋಯ

1642
0
SHARE
ಬೆಳ್ಳಾರೆ ಮುಖಾಂ ಉರೂಸ್‌, ಧಾರ್ಮಿಕ ಸಭೆ ನಡೆಯಿತು.

ಬೆಳ್ಳಾರೆ: ಅಲ್ಲಾಹುವಿನ ಇಷ್ಟದಾಸರಾದ ಅವುಲಿಯಾಗಳು, ಪ್ರವಾದಿಗಳನ್ನು ಮತ್ತು ಸ್ವಾಲಿಯಿಗಳನ್ನು ಸ್ಮರಿಸುವುದು ಇಸ್ಲಾಮಿನ ಆಚಾರಗಳ ವಿಷಯಗಳಲ್ಲಿ ಒಂದು ಪುಣ್ಯ ಕರ್ಮವಾಗಿದೆ ಎಂದು ಸಮಸ್ತ ಕೇರಳ ಜಂಇಯುತ್ತುಲ್‌ ಉಲಮಾ ಕೇಂದ್ರ ಸಮಿತಿ ಅಧ್ಯಕ್ಷ ಸಯ್ಯದ್‌ ಮಹಮ್ಮದ್‌ ಜಿಫ್ರಿ ಮುತ್ತುಕೋಯ ತಂಞಳ್‌ ಹೇಳಿದರು.

ಅವರು ಬೆಳ್ಳಾರೆ ಝಕಾರಿಯಾ ಜುಮಾ ಮಸೀದಿಯ ಪರಿಸರದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಅವರ ಉರೂಸ್‌ ಕಾರ್ಯಕ್ರಮದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರವಾದಿ ಅವರ ಕಾಲದಲ್ಲಿ ದಿನ, ತಿಂಗಳು, ವರ್ಷಕ್ಕೊಮ್ಮೆ ಹೀಗೆ ಹಲವು ರೀತಿಯಲ್ಲಿ ಝಿಯಾರತ್‌, ಅನ್ನದಾನಗಳು ನಡೆದಿವೆ. ಅನಂತರ ಸ್ವಹಾಬಿಗಳು, ತಾಬಿಯಗಳು ಆ ಚರ್ಯೆಯನ್ನು ಮುಂದುವರಿಸಿದರು. ಉರೂಸ್‌ ಸಮಾರಂಭ, ಧಾರ್ಮಿಕ ಉಪನ್ಯಾಸ, ಅನ್ನದಾನಗಳು ಇಸ್ಲಾಂ ಧರ್ಮದ ಚೌಕಟ್ಟಿಗೆ ಒಳಪಟ್ಟಿದ್ದು, ಅದನ್ನು ಪ್ರೋತ್ಸಾಹಿಸಬೇಕಿದೆ ಎಂದು ನುಡಿದರು. ಜಮಾಅತ್‌ ಅಧ್ಯಕ್ಷ ಕೆ.ಎಂ. ಮಹಮ್ಮದ್‌ ಅಧ್ಯಕ್ಷತೆ ವಹಿಸಿದ್ದರು. ಶಮೀಶ್‌ ಖಾನ್‌ ಇಡುಕ್ಕಿ ಮುಖ್ಯ ಭಾಷಣಗೈದರು.

ಮದರಸ ಮುಖ್ಯಗುರು ಮಹಮ್ಮದ್‌ ಮುಸ್ಲಿಯಾರ್‌, ಅಧ್ಯಾಪಕರಾದ ಝೈನುದ್ದಿನ್‌ ಮುಸ್ಲಿಯಾರ್‌, ಸುಲೈಮಾನ್‌ ಮುಸ್ಲಿಯಾರ್‌, ಜಮಾಅತ್‌ ಉಪಾಧ್ಯಕ್ಷ ಯು. ಎಚ್‌ ಅಬೂಬಕ್ಕರ್‌, ಕೋಶಾಧಿಕಾರಿ ಕೆ. ಮಮ್ಮಾಲಿ, ಬೆಳ್ಳಾರೆ ಹಿದಾಯ ಎಜುಕೇಶನ್‌ ಮತ್ತು ಚಾರಿಟೆಬಲ್‌ ಟ್ರಸ್ಟ್‌ ಪ್ರ.ಕಾ. ಶಾಫಿ ಬೆಳ್ಳಾರೆ, ಹಸೈನಾರ್‌ ಮುಸ್ಲಿಯಾರ್‌, ಅಬ್ದುಲ್‌ ಖಾದರ್‌ ಪೈಝಿ, ಹಾರಿಸ್‌ ರಹ್ಮಾನಿ, ಇಕ್ಬಾಲ್‌ ಎಲಿಮಲೆ, ಹಮೀದ್‌ ಹಾಜಿ ಸುಳ್ಯ, ಮದರಸ ಮ್ಯಾನೇಜ್‌ ಮೆಂಟ್‌ ಅಧ್ಯಕ್ಷ ತಾಜ್‌ ಮಹ ಮ್ಮದ್‌, ಬಿ.ಎ. ಮಹಮ್ಮದ್‌ ಬೆಳ್ಳಾರೆ, ಜಮಾಅತ್‌ ಮಾಜಿ ಅಧ್ಯಕ್ಷ ಕೆ. ಮೂಸ, ಮಹಮ್ಮದ್‌ ಎಂಜಿನಿಯರ್‌, ಜಮಾಅತ್‌ ಪ್ರ.ಕಾ. ಇಬ್ರಾಹಿಂ ಕೆ., ಬೆಳ್ಳಾರೆ, ಖೀದ್ಮತುಲ್‌ ಇಸ್ಲಾಂ ಅಧ್ಯಕ್ಷ ಬಿ.ಎ. ಬಶೀರ್‌ ಉಪಸ್ಥಿತರಿದ್ದರು.

ಕರೀಂ ದಾರಿಮಿ ಪ್ರಸ್ತಾವನೆಗೈದರು. ಮುದರಿಸ್‌ ತಾಜುದ್ದಿನ್‌ ರಹ್ಮಾನಿ ಸ್ವಾಗತಿಸಿ, ಸಮಸ್ತ ಸುನ್ನಿ ಮಹಲ್‌ ಫೆಡರೇಶನ್‌ ಅಧ್ಯಕ್ಷ ಬಶೀರ್‌ ಕೆ.ಎ. ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here