Home ಧಾರ್ಮಿಕ ಸುದ್ದಿ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಕ್ಷೇತ್ರ ನೂತನ ಮೂಡುಗೋಪುರ ಸಮರ್ಪಣೆ

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಕ್ಷೇತ್ರ ನೂತನ ಮೂಡುಗೋಪುರ ಸಮರ್ಪಣೆ

1183
0
SHARE

ಬೆಳ್ತಂಗಡಿ : ಬಳ್ಳಮಂಜ ಮಹ ತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ 1.50 ಕೋ.ರೂ.ಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಮೂಡು ಗೋಪುರದ ಸಮರ್ಪಣಾ ಸಮಾರಂಭವು ಸೋಮವಾರ ಕ್ಷೇತ್ರದ ಬ್ರಹ್ಮಕಲಶ ವಾರ್ಷಿಕ ದಿನಾಚರಣೆ ಹಾಗೂ ವಾರ್ಷಿಕ ಮೇಷ ಜಾತ್ರೆಯ ಸಂದರ್ಭದಲ್ಲಿ ನಡೆಯಿತು.

ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಅವರು ಮೂಡುಗೋಪುರವನ್ನು ಉದ್ಘಾಟಿಸಿದರು. ಆನುವಂಶೀಯ ಆಡಳಿತ ಮೊಕ್ತೇಸರ ಡಾ| ಎಂ. ಹರ್ಷ ಸಂಪಿಗೆತ್ತಾಯ ಉಪಸ್ಥಿತರಿ ದ್ದರು. ಕ್ಷೇತ್ರದ ಶಿವಪ್ರಸಾದ್‌ ತಂತ್ರಿ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಬ್ರಹ್ಮಕಲಶ ದಿನಾಚರಣೆ, ಸಂಹಿತಾಕಲಶ

ಕಾರ್ಯಕ್ರಮದಲ್ಲಿ ಬೆಳಗ್ಗೆ ಬ್ರಹ್ಮಕಲಶ ದಿನಾಚರಣೆ, ಮೂಡುಗೋಪುರ ಸಮ ರ್ಪಣೆ ಪ್ರಯುಕ್ತ ಪಂಚವಿಂಶತಿ ದ್ರವ್ಯಕಲಶ ಪ್ರತಿಷ್ಠೆ, 8 ಜನ ವೇದಜ್ಞರಿಂದ ಋಗ್ವೇದದ 8 ಅಷ್ಟಕಗಳ ಪಾರಾಯಣ ಪೂರ್ವಕ ಸಂಹಿತಾಕಲಶ, ಅಧಿವಾಸ ಹೋಮ, ಪವಮಾನ ಹೋಮ, ದ್ವಾದಶ ನಾರಿಕೇಳ ಅಷ್ಟದ್ರವ್ಯ ಗಣಪತಿ ಹೋಮ, ಈಶ್ವರ ದೇವರಿಗೆ ಏಕದಶಾರುದ್ರಾಭಿಷೇಕ, ಆಶ್ಲೇಷಾ ಬಲಿ, ಬ್ರಹ್ಮಚಾರಿ ಆರಾಧನೆ, ಗಣಪತಿ ದೇವರಿಗೆ ಕಟಾಹಾಪೂಪ ಸಮರ್ಪಣೆ, ಮಹಾಪೂಜೆ ನಡೆಯಿತು.

ಕ್ಷೇತ್ರದಲ್ಲಿ ಎ.30ರಂದು ಮಧ್ಯಾಹ್ನ ಮಹಾಪೂಜೆ (ಏಕಾದಶಿ), ರಾತ್ರಿ ಚಂದ್ರಮಂಡಲೋತ್ಸವ, ಮಹಾಪೂಜೆ, ಮೇ 1ರಂದು ಬೆಳಗ್ಗೆ ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಮಹಾರಥೋತ್ಸವ, ಮಹಾಪೂಜೆ, ಶ್ರೀ ಭೂತಬಲಿ, ಮೇ 2ರಂದು ಪ್ರಾತಃಕಾಲ ಕವಾಟೋದ್ಘಾಟನೆ, ವಸಂತ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಅವಭೃಥ, ರಾತ್ರಿ ಧ್ವಜಾವರೋಹಣ, ಮಹಾಪೂಜೆ, ಮೇ 3ರಂದು ಮಹಾ ಸಂಪ್ರೋಕ್ಷಣೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here