Home ಧಾರ್ಮಿಕ ಸುದ್ದಿ ಧನಾತ್ಮಕ ಚಿಂತನೆಗಳ ಮೂಲಕ ಸಮಾಜದಒಳಿತಿಗೆ ಪ್ರಯತ್ನಿಸಬೇಕು: ಎಡನೀರು ಶ್ರೀ

ಧನಾತ್ಮಕ ಚಿಂತನೆಗಳ ಮೂಲಕ ಸಮಾಜದಒಳಿತಿಗೆ ಪ್ರಯತ್ನಿಸಬೇಕು: ಎಡನೀರು ಶ್ರೀ

ಬೆಳ್ಳೂರು ಕ್ಷೇತ್ರ: ನವರಾತ್ರಿ ಮಹೋತ್ಸವ

179
0
SHARE

ಬದಿಯಡ್ಕ: ದೇವರನ್ನು ಆರಾಧಿಸುವ ಮೂಲಕ ಮಾನಸಿಕ ಸ್ವಾಸ್ತ್ಯವನ್ನು ಕಂಡುಕೊಳ್ಳಬಹುದು. ಅದರಲ್ಲೂ ಸ್ವಾರ್ಥ ರಹಿತವಾದ ಅಂತರ್ಚಿಂತನೆಗಳಿಂದ ಕೂಡಿದ ಸಾಮೂಹಿಕ ಪ್ರಾರ್ಥನೆಗೆ ಭಗವಂತ ಶೀಘ್ರ ಅನುಗ್ರಹ ನೀಡುತ್ತಾನೆ ಸತ್ಕಾರ್ಯಗಳಿಂದ ಪ್ರಾಪ್ತಿಯಾಗುವ ಶುಭಫಲವು ಶಾಶ್ವತವಾದುದು. ಹಿಂದೂ ಪುರಾಣಗಳ ಪ್ರಕಾರ ಹೋಮ -ಹವನಗಳನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗಿ ಪಾಪಕರ್ಮಗಳು ದೂರವಾಗುತ್ತವೆ. ಭಕ್ತಿ ಮತ್ತು ಶ್ರದ್ಧೆ ಮನುಷ್ಯನ ಮನಸನ್ನು ಶಾಂತಗೊಳಿಸುತ್ತದೆ. ಧನಾತ್ಮಕ ಚಿಂತನೆಗಳ ಮೂಲಕ ಸಮಾಜದ ಒಳಿತಿಗೆ ಪ್ರಯತ್ನಿಸಬೇಕು ಎಂದು ಎಡನೀರು ಮಠಾಧಿಪತಿ ಪರಮಪೂಜ್ಯ ಶ್ರೀ ಕೇಶವಾನಂದ ಭಾರತಿ ಶ್ರೀಪಾದಂಗಳವರು ನುಡಿದರು.

ಅವರು ಬೆಳ್ಳೂರು ಮಹಾವಿಷ್ಣು ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದಂಗವಾಗಿ ನಡೆದ ಚಂಡಿಕಾಹೋಮದ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಜಗನ್ಮಾತೆ ಮಂಗಳದಾತೆಯಾಗಿದ್ದು ನಂಬಿದ ಭಕ್ತರಿಗೆ ಸರ್ವ ಸೌಭಾಗ್ಯಗಳನ್ನು ಕರುಣಿಸುವ ದಯಾಮಯಿ. ತಾಯಿ ಮಕ್ಕಳನ್ನು ನಿಸ್ವಾರ್ಥ ಪ್ರೀತಿಯಿಂದ ಪರಿಪಾಲಿಸುವಂತೆ ಜತನದಿಂದ ಭಕ್ತವೃಂದವನ್ನು ಕಾಯುವಳು. ನಿಷ್ಕಾಮ, ಸ್ವಚ್ಛ ಮನಸ್ಸಿನ ದೇವರ ಸ್ಮರಣೆಯೇ ನಿಜವಾದ ಭಕ್ತಿ ಎಂದು ಆವರು ಹೇಳಿದರು.

ವೇ|ಮೂ| ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರ ಉಪಸ್ಥಿತಿಯಲ್ಲಿ ಚಂಡಿಕಾಹೋಮದ ಪೂರ್ಣಾಹುತಿ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಕ್ಷೇತ್ರದ ಚಂದ್ರಶೇಖರ ರಾವ್‌ ಕಳ್ಳಗ ಮಾತನಾಡಿ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಮಾಡುವ ಯಾವುದೇ ಕಾರ್ಯವೂ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ಒಗ್ಗಟ್ಟಿನಿಂದ, ಸಮಭಾವದಿಂದ ಜತೆಸೇರಿ ದುಡಿಯುವ ಸನ್ಮನಸ್ಸಿನ ಉನ್ನತ ಚಿಂತನೆಗಳು ಬೆಳ್ಳೂರು ಕ್ಷೇತ್ರದ ಆಭಿವೃದ್ಧಿಗೆ ಕಾರಣ. ಜನರ ಪೂರ್ಣ ಸಹಕಾರ ಹಾಗೂ ಸೇವಾ ಮನೋಭಾವ ಅಭಿನಂದನೀಯ ಎಂದು ಸಂತಸ ವ್ಯಕ್ತಪಡಿಸಿದರು.

ಶ್ರೀ ಅಣ್ಣಪ್ಪಸ್ವಾಮಿ ಕ್ಷೇತ್ರ ಐತ್ತನಡ್ಕ ಇವರ ವತಿಯಿಂದ ಅನ್ನದಾನ, ಆ ಬಳಿಕ ಶ್ರೀ ಮಹಾಲಿಂಗೇಶ್ವರ ಯಕ್ಷ ಬಳಗ ಸೂರಾಲು ಇವರಿಂದ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ಜರಗಿತು.

ಕ್ಷೇತ್ರದ ಆಡಳಿತ ಸಮಿತಿಯ ಗಂಗಾಧರ ಬಳ್ಳಾಲ್‌, ಡಾ| ರವಿ ಪ್ರಸಾದ್‌, ಮೋಹನ್‌ ದಾಸ್‌ ರೈ, ಚಂದ್ರ ಶೇಖರ ಆಚಾರ್ಯ, ವೆಂಕಟ ಕೃಷ್ಣ, ವಿಜಯ ಕುಮಾರ್‌, ಮಂಜುನಾಥ ರೈ, ಪ್ರದೀಪ್‌ ಕುಮಾರ್‌, ಅರವಿಂದ್‌, ನಾಗ ರಾಜ್‌ ನೇಜಿಕಾರು, ಚಿಕ್ಕಪ್ಪು ರೈ, ಪದ್ಮನಾಭ ರೈ, ಪುಂಡರೀಕಾಕ್ಷ ಕಡಂಬಳಿತ್ತಾಯ, ತ್ಯಾಂಪಣ್ಣ ಗೌಡ, ಶ್ರೀಹರಿ ಮಾಲೆಂಕಿ, ಕ್ಷೇತ್ರ ಸಮಿತಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here