Home ಧಾರ್ಮಿಕ ಸುದ್ದಿ ಬೆಳಾಲು ಕ್ಷೇತ್ರ: ನೂತನ ಬಿಂಬ ಪ್ರತಿಷ್ಠೆ

ಬೆಳಾಲು ಕ್ಷೇತ್ರ: ನೂತನ ಬಿಂಬ ಪ್ರತಿಷ್ಠೆ

1323
0
SHARE

ಬೆಳ್ತಂಗಡಿ : ಜೀರ್ಣೋದ್ಧಾರ ಗೊಂಡ ಅನಂತೋಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ವೇ| ಮೂ| ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ 11.09ಕ್ಕೆ ನೂತನ ಬಿಂಬ ಪ್ರತಿಷ್ಠಾ ಕಾರ್ಯ ನೆರವೇರಿತು.

ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.

ಧರ್ಮಸ್ಥಳದ ಅರ್ಚಕ ರಾಮಕೃಷ್ಣ ಕಲ್ಲುರಾಯ, ಕ್ಷೇತ್ರದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್‌ ಜೈನ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜತ್ತಣ್ಣ ಗೌಡ, ಅಧ್ಯಕ್ಷ ಆನಂದ ಆಚಾರ್ಯ, ಪದಾಧಿಕಾರಿ ಗಳಾದ ಸತೀಶ್‌ ಗೌಡ, ದುರ್ಗಾಪ್ರಸಾದ್‌ ಕೆರ್ಮುಣ್ಣಾಯ, ತಿಮ್ಮಪ್ಪ ಗೌಡ, ಗಿರೀಶ್‌ ಬಾರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ಋತ್ವಿಜರಿಂದ ಚತುರ್ವೇದ ಪಾರಾ ಯಣ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಚೆಂಡೆ, ಭಜನ ತಂಡಗಳು, ವಾದ್ಯ ಘೋಷದೊಂದಿಗೆ ಪ್ರತಿಷ್ಠಾ ಕಾರ್ಯ ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.

ಇಂದಿನ ಕಾರ್ಯಕ್ರಮ
ಮೇ 17ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, ಅಂಕುರ ಪೂಜೆ, ಮಂಟಪದಲ್ಲಿ ಉಷಾಃ ಪೂಜೆ, ಇಂದ್ರಾದಿ ಪರಿವಾರ ಪ್ರತಿಷ್ಠೆ, ಕ್ಷೇತ್ರಪಾಲ ಪ್ರತಿಷ್ಠೆ, ಪರಿವಾರ ದೈವಗಳಾದ ಶ್ರೀ ರಕ್ತೇಶ್ವರೀ, ಕಲ್ಲುರ್ಟಿ, ಪಂಜುರ್ಲಿ ಭೈರವ ದೈವಗಳ ಪ್ರತಿಷ್ಠೆ, ಮಧ್ಯಾಹ್ನ 11ರಿಂದ ಭಜನ ಕಾರ್ಯ ಕ್ರಮ, ಮಂಟಪದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಹೋಮ ಕುಂಡ ಶುದ್ಧಿ ಬಳಿಕ ದುರ್ಗಾಚಂಡಿಕಾಹೋಮ, ರಾತ್ರಿ 7ರಿಂದ ಯಕ್ಷಗಾನ ಜರಗಲಿದೆ.

LEAVE A REPLY

Please enter your comment!
Please enter your name here