ಬೆಳ್ತಂಗಡಿ : ಜಿಲ್ಲೆಯ ಜನರು ಪ್ರತಿಭಾವಂತರು, ವಿಚಾರವಂತ ರಾಗಿದ್ದಾರೆ. ಆದರೆ ಆಚಾರವಂತರಾಗಿ ಸಂಸ್ಕೃತಿಯ ಪೋಷಣೆ ಮಾಡಬೇಕಾಗಿದೆ. ಶ್ರದ್ಧಾ ಭಕ್ತಿಯ ಪ್ರಾರ್ಥನೆಗೆ ದೇವರು ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ನುಡಿದರು.
ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪ್ರಯುಕ್ತ ರವಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವುದರೊಂದಿಗೆ ದೇವರಲ್ಲಿ ದೃಢನಂಬಿಕೆಯಿಡಬೇಕು. ನಿಷ್ಠೆ, ಪ್ರಾರ್ಥನೆಗೆ ದೇವರು ಇಷ್ಟಾರ್ಥ ಪ್ರಾಪ್ತಿಗೊಳಿಸುತ್ತಾನೆ. ಶ್ರೀ ಕ್ಷೇತ್ರ ಧರ್ಮ ಸ್ಥಳದ ವತಿಯಿಂದ ರಾಜ್ಯಾದ್ಯಂತ ದೇವ ಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದೆ. ಮುಂದಕ್ಕೆ ಊರವರು ಒಂದೇ ಮನಸ್ಸಿನಿಂದ ಸಂಘಟಿತರಾಗಿ ಮುನ್ನಡೆ ಸಬೇಕು. ಬೆಳಾಲು ದೇವಸ್ಥಾನದ ಅಭಿವೃದ್ಧಿ ಯಲ್ಲಿ ಊರವರು, ಸಮಿತಿಯವರು ಉತ್ತಮ ಕೆಲಸ ಮಾಡಿದ್ದಾರೆ. ಅವರೆಲ್ಲರಿ ಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಮ್ಮಾನ
ವೇ|ಮೂ| ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳನ್ನು ಸಮ್ಮಾನಿಸಲಾಯಿತು.
ಧಾರ್ಮಿಕ ಭಾಷಣ ಮಾಡಿದ ಪುತ್ತೂರಿನ ವೇದಮೂರ್ತಿ ಶ್ರೀವತ್ಸ ಕೆದಿಲಾಯ, ಹಿರಿಯರು ನಿರ್ಮಿಸಿದ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವುದರಿಂದ ಊರಿಗೆ ನೆಮ್ಮದಿ ಪ್ರಾಪ್ತಿ ಆಗುತ್ತದೆ. ದೇವಸ್ಥಾನಗಳಲ್ಲಿ ನಿರಂತರ ಭಜನೆ ಸಂಸ್ಕಾರ ಉಳಿಸಿಕೊಳ್ಳುವ ಕಾರ್ಯ ನಡೆಯಬೇಕಾಗಿದ್ದು, ದೇವಸ್ಥಾನದ ಜೀರ್ಣೋದ್ಧಾರ ದಲ್ಲಿ ಭಾಗಿಯಾಗುವುದೇ ಒಂದು ಯೋಗ ಎಂದರು.
‘ಊರಿಗೆ ನೆಮ್ಮದಿ ಪ್ರಾಪ್ತಿ’