Home ಧಾರ್ಮಿಕ ಸುದ್ದಿ ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭ ಕ್ಷೇತ್ರಮೇ 16: ದೇವರ ಬಿಂಬ ಪ್ರತಿಷ್ಠೆ

ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭ ಕ್ಷೇತ್ರಮೇ 16: ದೇವರ ಬಿಂಬ ಪ್ರತಿಷ್ಠೆ

1543
0
SHARE

ಬೆಳ್ತಂಗಡಿ : ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ ಜೀರ್ಣೋದ್ಧಾರ ಕಾರ್ಯಗಳಿಂದ ನವೀಕರಣಗೊಂಡಿದ್ದು, ಮೇ 16ರಂದು ಬೆಳಗ್ಗೆ 11.09ರ ಕರ್ಕಾಟಕ ಲಗ್ನದಲ್ಲಿ ದೇವರ ಬಿಂಬ ಪ್ರತಿಷ್ಠಾಪನೆ ನಡೆಯಲಿದೆ. ಮೇ 19ರಂದು ಬೆಳಗ್ಗೆ 10.56ರ ಕರ್ಕಾಟಕ ಲಗ್ನದಲ್ಲಿ ಶ್ರೀ ಅನಂತ ಪದ್ಮನಾಭ ದೇವರಿಗೆ ಬ್ರಹ್ಮಕಲಶಾಭಿಷೇಕ ಜರಗಲಿದೆ.

ನೂತನ ಶ್ರೀ ಅನಂತಪದ್ಮನಾಭ ದೇವರ ಕರಿಶಿಲಾ ವಿಗ್ರಹವನ್ನು ಕಾರ್ಕಳದಲ್ಲಿ ಶಿಲ್ಪಿ ರಾಜು ಮುರ್ಡೇ ಶ್ವರ ಅವರು 127 ಯವ ಅಳತೆಯ ಚತುರ್ಭುಜ ನಿಂತ ಭಂಗಿಯ ಸುಂದರ ಮೂರ್ತಿಯನ್ನು ನಿರ್ಮಿ ಸಿದ್ದಾರೆ. ವಿಗ್ರಹದ ಮೇಲಿನ ಬಲಕೈಯಲ್ಲಿ ಚಕ್ರ, ಎಡಕೈಯಲ್ಲಿ ಪದ್ಮ, ಕೆಳಗಿನ ಬಲಗೈಯಲ್ಲಿ ಶಂಖ ಹಾಗೂ ಎಡಕೈಯಲ್ಲಿ ಗದೆ ಹಿಡಿದಿದ್ದು, ಹಿಂಭಾಗದಲ್ಲಿ ಏಳು ಹೆಡೆಯ ನಾಗಫಣಿಯನ್ನು ಹೊಂದಿ ಅತ್ಯಾಕರ್ಷಕವಾಗಿ ರೂಪಿಸಲಾಗಿದೆ.

ಬೆಳಾಲು ಅನಂತೋಡಿ ಶ್ರೀ ಅನಂತೋಡಿ ಅನಂತಪದ್ಮನಾಭ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೇ 14ರಂದು ಬೆಳಗ್ಗೆ 6ಕ್ಕೆ ತ್ರಿಕಾಲ ಪೂಜೆ, ಗಣಹೋಮ, ಅಂಕುರ ಪೂಜೆ, ತತ್ವಕಲಶ ಪೂಜೆ, ತತ್ವಹೋಮ, ತತ್ವ ಕಲಶಾಭಿಷೇಕ, ಪರಿಕಲಶಾಭಿಷೆೇಕ ಅನುಜ್ಞಾಬ್ರಹ್ಮಕಲಶಾಭಿಷೆೇಕ ಜರಗಲಿದೆ. ಬೆಳಗ್ಗೆ 8ರಿಂದ ಒಂದು ಮಂಡಲ (48 ಬಾರಿ) ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಜರಗಲಿದೆ.

ಬೆಳಗ್ಗೆ 10ಗಂಟೆಗೆ ಪೊದುಂಬಿಲ ಕನ್ಯಾಡಿ, ಧರ್ಮಸ್ಥಳ, ಅನಾರು, ಪಟ್ರಮೆ, ಕೊಕ್ಕಡ, ಪುದುವೆಟ್ಟು, ಕಾರ್ಯತ್ತರ್ಡ್ಕ ಗ್ರಾಮಸ್ಥರಿಂದ ಹಸುರುವಾಣಿ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.ಸಾಯಂಕಾಲ ಆಶ್ಲೇಷಾ ಬಲಿ ನಡೆಯುವುದು.

ಸಂಜೆ 6ಗಂಟೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಇಂದು ಅನುಜ್ಞಾಬ್ರಹ್ಮಕಲಶಾಭಿಷೆೇಕ
ಬೆಳಾಲು ಅನಂತೋಡಿ ಶ್ರೀ ಅನಂತೋಡಿ ಅನಂತಪದ್ಮನಾಭ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೇ 14ರಂದು ಬೆಳಗ್ಗೆ 6ಕ್ಕೆ ತ್ರಿಕಾಲ ಪೂಜೆ, ಗಣಹೋಮ, ಅಂಕುರ ಪೂಜೆ, ತತ್ವಕಲಶ ಪೂಜೆ, ತತ್ವಹೋಮ, ತತ್ವ ಕಲಶಾಭಿಷೇಕ, ಪರಿಕಲಶಾಭಿಷೆೇಕ ಅನುಜ್ಞಾಬ್ರಹ್ಮಕಲಶಾಭಿಷೆೇಕ ಜರಗಲಿದೆ. ಬೆಳಗ್ಗೆ 8ರಿಂದ ಒಂದು ಮಂಡಲ (48 ಬಾರಿ) ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಜರಗಲಿದೆ. ಬೆಳಗ್ಗೆ 10ಗಂಟೆಗೆ ಪೊದುಂಬಿಲ ಕನ್ಯಾಡಿ, ಧರ್ಮಸ್ಥಳ, ಅನಾರು, ಪಟ್ರಮೆ, ಕೊಕ್ಕಡ, ಪುದುವೆಟ್ಟು, ಕಾರ್ಯತ್ತರ್ಡ್ಕ ಗ್ರಾಮಸ್ಥರಿಂದ ಹಸುರುವಾಣಿ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.ಸಾಯಂಕಾಲ ಆಶ್ಲೇಷಾ ಬಲಿ ನಡೆಯುವುದು. ಸಂಜೆ 6ಗಂಟೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

LEAVE A REPLY

Please enter your comment!
Please enter your name here