Home ಧಾರ್ಮಿಕ ಸುದ್ದಿ ಬೇಲಾಡಿ ಪುಂಡರೀಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ

ಬೇಲಾಡಿ ಪುಂಡರೀಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ

ಮಾ. 8: ಬ್ರಹಕಲಶಾಭಿಶೇಕ, ನಾಗಮಂಡಲ ಸೇವೆ

809
0
SHARE

ಬೆಳ್ಮಣ್‌ : ಬೇಲಾಡಿಯ ಪುಂಡರೀಕ ಶ್ರೀ ವಿಷ್ಣುಮೂರ್ತಿ ಸನ್ನಿಧಿಯು ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು ಮಾ. 8ರಂದು ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ನಾಗಮಂಡಲೋತ್ಸವ ನಡೆಯಲಿದೆ.

ಈ ಸಂದರ್ಭ ಮಾ. 9ರ ವರೆಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ನಾಗಮಂಡಲೋತ್ಸವ ಸಹಿತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಇತಿಹಾಸ
ಪರ್ಯಾಯ ಶ್ರೀ ಫಲಿಮಾರು ಮಠದ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಬೇಲಾಡಿಯ ಈ ದೇಗುಲದ ಇತಿಹಾಸದ ಪುಟಗಳಲ್ಲಿ ಸ್ಥಳೀಯ ಶ್ರೀ ಕಾಂತೇಶ್ವರ ದೇವಾಲಯ ಮತ್ತು ಅದೇ ಕೂಡುಕಟ್ಟಿನ ವ್ಯಾಪ್ತಿಗೆ ಸೇರುವ ಈ ದೇಗುಲ ಪಾಲಡ್ಕ ಕೆಳಗಿನ ಮನೆ ಕುಟುಂಬಸ್ಥರಿಗೆ ಸಂಬಂಧಿಸಿದ್ದು ಎನ್ನುವ ಮಾಹಿತಿಯೂ ತಿಳಿದು ಬರುತ್ತದೆ. ಹೊಯ್ಸಳ್ಳೋತ್ತರ ಕಾಲದ
ನಿರ್ಮಿತ ಎನ್ನಲಾಗಿರುವ ಈ ಶಿಲಾ ಮೂರ್ತಿಯನ್ನು ವಿಷ್ಣುಮೂರ್ತಿ ಹಾಗೂ ಸ್ಥಳೀಯವಾಗಿ ಪುಂಡರೀಕ ದೇವರು ಎಂದು ಆರಾಧಿಸಿಕೊಂಡು ಬರಲಾಗುತ್ತಿದೆ. ವೆಂಕಟರಮಣ ದೇವರು ಎನ್ನುವ ಹೆಸರಿನಲ್ಲಿ ದೇವಾಲಯಕ್ಕೆ ತಸ್ತೀಕು ಬರುತ್ತಿತ್ತು ಎನ್ನುವುದು ಗಮನಾರ್ಹ.

ಭೂ ಮಸೂದೆಗೂ ಮೊದಲು ದೇವಳದ ಹೆಸರಲ್ಲಿದ್ದ ಭೂಮಿ, ಆಸ್ತಿಯ ಬಗ್ಗೆ ಸಾಕ್ಷಿಯಾಗಿರುವ ಅಂಗಣಬೈಲು ಪರಿಸರ ಸಹಿತ ಇತಿಹಾಸದ ಕುರುಹುಗಳು, ಅಗ್ರಹಾರದ ಈ ನೆಲೆಯ ಬಲಿ ಮೂರ್ತಿ ಚಿನ್ನಾಭರಣಗಳನ್ನು ಬಾವಿಗೆ ಎಸೆದ ಬ್ರಾಹ್ಮಣರು ದೇಶಾಂತರ ಹೋದ ವಿವರಗಳು ಇಲ್ಲಿನ ಸಮೃದ್ಧ ಇತಿಹಾಸದ ಸೂಕ್ಷ್ಮತೆಯನ್ನು ತೆರೆದಿಡುತ್ತವೆ. 12 ವರ್ಷಗಳ ಬಳಿಕ ಮತ್ತೂಮ್ಮೆ ಜೀರ್ಣೋದ್ಧಾರಕ್ಕೆ ತೆರೆದುಕೊಂಡಿರುವ ದೇಗುಲ ಇದೀಗ 60 ಲಕ್ಷ ರೂ. ವೆಚ್ಚದಲ್ಲಿ ಗರ್ಭಗೃಹದ ಕೆಳ ಛಾವಣಿಗೆ ತಾಮ್ರದ ಹೊದಿಕೆ, ತೀಥ ಮಂಟಪ ಹಾಗೂ ಒಳಾಂಗಣಕ್ಕೆ ಗ್ರಾನೈಟ್‌ ಹಾಸು, ಅಂಗಣಕ್ಕೆ ಶಾಶ್ವತ ಚಪ್ಪರ, ಹೊರಾಂಗಣ ರಚನೆ, ನಾಗ ಸನ್ನಿಧಿಯ ನವೀಕರಣ ಹೀಗೆ ಅಗತ್ಯ ಕಾಮಗಾರಿಗಳನ್ನು ಕಂಡಿದೆ.

ವರ್ಷವೂ ನವಕಪ್ರಧಾನ, ತುಳಸೀ ಅರ್ಚನೆ, ಇತರೆ ಸೇವೆಗಳು, ಎಳ್ಳಮವಾಸ್ಯೆಯ ಮರುದಿನ ಪವಮಾನ ಸೂಕ್ತ ಕಲಶ ಅಭಿಷೇಕ, ರಂಗಪೂಜೆ ಇಲ್ಲಿ ವೈಭವದಿಂದ ಜರಗುತ್ತಿದೆ. ಪ್ರಸ್ತುತ ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲಡ್ಕ ಕೆಳಗಿನ ಮನೆತನದವರಾಗಿರುವ ಚಂದ್ರ ಪ್ರಕಾಶ ಶೆಟ್ಟಿ, ಬೇಲಾಡಿ ಬಾವ ಅಶೋಕಾನಂದ ಶೆಟ್ಟಿ, ವಿಟ್ಠಲ ಬೇಲಾಡಿ, ಮೋಹನದಾಸ ಅಡ್ಯಂತಾಯ, ಪುಂಡರೀಕ ಸದಾಶಿವ ಶೆಟ್ಟಿ ಮೊದಲಾದವರ ಮುತುವರ್ಜಿ ಊರ ಪರವೂರ ಸಹಕಾರ ಅರ್ಚಕ ಯು ಗೋಪಾಲಕೃಷ್ಣ ಭಟ್‌ ಅವರ ಸೇವೆಯಿಂದಾಗಿ ಗತವೈಭವದ ಈ ದೇಗುಲ ಮತ್ತೆ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here