ಕಡಬ : ಕೋಡಿಂಬಾಳ ಗ್ರಾಮದ ಬೆದ್ರಾಜೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಮಾರಿಯಮ್ಮ ದೇವಿ ಹಾಗೂ ಶ್ರೀ ಪರಿವಾರ ದೈವಗಳ ಪ್ರಥಮ ಪ್ರತಿಷ್ಠಾ ವಾರ್ಷಿಕೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಶುಕ್ರವಾರ ಆರಂಭಗೊಂಡಿತು.
ಬೆಳಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ ಹಾಗೂ ಶುದ್ಧಿ ಕಲಶ ನೆರವೇರಿದ ಬಳಿಕ ಗೊನೆ ಮುಹೂರ್ತ ನಡೆಯಿತು. ಸಂಜೆ ನೆಟ್ಟಣದ ಶ್ರೀ ವಿಘ್ನೇಶ್ವರ ಭಜನ ಮಂಡಳಿಯ ಸದಸ್ಯರಿಂದ ಭಜನೆ ನಡಿಯಿತು. ರಾತ್ರಿ ಶ್ರೀ ಮಾರಿಯಮ್ಮ ದೇವಿ ಮತ್ತು ಶ್ರೀ ಪರಿವಾರ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ಜರಗಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಚಲ್ಲ ಬೆದ್ರಾಜೆ, ಸ್ಥಾಪಕಾಧ್ಯಕ್ಷ ಸುಂದರ ಕೋಡಿಂಬಾಳ, ಸ್ಥಾಪಕ ಕಾರ್ಯದರ್ಶಿ ಶೇಖರ ಬೆದ್ರಾಜೆ, ಅಧ್ಯಕ್ಷ ಉಮೇವ್ ಕೋಡಿಂಬಾಳ, ಕಾರ್ಯದರ್ಶಿ ಗಂಗಾಧರ ಬೆದ್ರಾಜೆ ಮತ್ತಿತರರು ಉಪಸ್ಥಿತರಿದ್ದರು.
ಬಲಿ ಸಮರ್ಪಣೆ
ಶನಿವಾರ ಬೆಳಗ್ಗೆ ಪರಿವಾರ ದೈವಗಳಿಗೆ ಮಾರಿಕಳದಲ್ಲಿ ಬಲಿ ಸಮರ್ಪಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.