Home ಧಾರ್ಮಿಕ ಕಾರ್ಯಕ್ರಮ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಸಂವತ್ಸರೋತ್ಸವ

ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಸಂವತ್ಸರೋತ್ಸವ

1908
0
SHARE

ಬಾಯಾರು: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಸಂವತ್ಸರೋತ್ಸವ ಜೂ. 19ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಆ ಪ್ರಯುಕ್ತ ಬೆಳಗ್ಗೆ 8ಕ್ಕೆ ಗಣಪತಿ ಹವನ, ನವಕ ಕಲಶ, ಏಕಾದಶ ರುದ್ರಾಭಿಷೇಕ, ಹೂವಿನ ಪೂಜೆ ನಡೆಯಲಿರುವುದು. ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿರುವುದು.

ಸಂಜೆ 6 ರಿಂದ ಭಜನಾ ಸೇವೆ ಹಾಗೂ ರಾತ್ರಿ 8 ಗಂಟೆಗೆ ರಂಗಪೂಜಾ ಮಹೋತ್ಸವ ಜರಗಲಿರುವುದು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜೀರ್ಣೋದ್ಧಾರ ಸಮಿತಿ ವಿನಂತಿಸಿದೆ. ಅದೇ ದಿನ ಸಂಜೆ 3 ಗಂಟೆಗೆ ಜೀರ್ಣೋದ್ಧಾರ ಸಮಿತಿಯ ಸಭೆ ನಡೆಯಲಿದ್ದು ಭಕ್ತರು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here