Home ಧಾರ್ಮಿಕ ಸುದ್ದಿ ಭರದಿಂದ ಸಾಗುತ್ತಿರುವ ನವೀಕರಣ ಕಾರ್ಯ

ಭರದಿಂದ ಸಾಗುತ್ತಿರುವ ನವೀಕರಣ ಕಾರ್ಯ

•ಬಾಯಾರುಪದವು ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲ

1327
0
SHARE
ನವೀಕರಣಗೊಳ್ಳುತ್ತಿರುವ ದೇವಸ್ಥಾನದ ಗರ್ಭಗುಡಿ ಮುಂಭಾಗ

ಕುಂಬಳೆ: ಬಾಯಾರುಪದವು ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲದ ನವೀಕರಣ ಕಾರ್ಯ ಭರದಲ್ಲಿ ನಡೆಯುತ್ತಿದೆ. ಮರದ ಕೆತ್ತನೆ ಕಾರ್ಯ, ದೇವಸ್ಥಾನದ ಗರ್ಭಗುಡಿ ಮುಂಭಾಗದ ನಮಸ್ಕಾರ ಮಂಟಪಕ್ಕೆ ಕಲ್ಲುಹಾಸು ಹೊದಿಸುವ ಕಾರ್ಯ ಸಹಿತ ಗರ್ಭಗುಡಿಯ ಮೇಲ್ಛಾವಣಿ ಮತ್ತು ಒಳಾಂಗಣದ ಕೆಲಸಗಳು ನಡೆಯುತ್ತಿದೆ.

ತೃಶ್ಶೂರ್‌ ಮೂಲದ ಮರದ ಕೆತ್ತನೆ ಕುಶಲಕರ್ಮಿಗಳು ದೇವಸ್ಥಾನದ ಮೇಲ್ಛಾ ವಣಿ ನಿರ್ಮಾಣ ಸಹಿತ ಮರದ ಆಲಂಕಾರಿಕ ಕೆತ್ತನೆ ಕಾರ್ಯದಲ್ಲಿ ಹಲವು ತಿಂಗಳಿನಿಂದ ತೊಡಗಿದ್ದಾರೆ. ಬಾಯಾರು ಗ್ರಾಮದ ಕನಿಯಾಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನವು ಈ ಗ್ರಾಮದ ಏಕೈಕ ಸುಬ್ರಹ್ಮಣ್ಯೇಶ್ವರ ಕ್ಷೇತ್ರವಾಗಿದೆ. ದ್ರಾವಿಡ ಮತ್ತು ಕರ್ನಾಟಕ ಎರಡೂ ಶೈಲಿಗಳಲ್ಲಿ ಪುನರ್‌ ನಿರ್ಮಾ ಣಗೊಳ್ಳುತ್ತಿರುವ ದೇವಸ್ಥಾನವು ದಕ್ಷಿಣ ಕೇರಳ ಮತ್ತು ತಮಿಳುನಾಡು ಬಾಗದಲ್ಲಿರುವ ಸುಬ್ರ ಹ್ಮಣ್ಯೇಶ್ವರ ದೇವಸ್ಥಾನದಂತೆ ಕಂಗೊಳಿಸಲಿದೆ.

2019ರಲ್ಲಿ ಶತಮಾನ ಪೂರೈಸುತ್ತಿರುವ ದೇವಸ್ಥಾನವು ನೂರು ವರ್ಷಗಳ ಹಿಂದೆ ಊರ ಹಿರಿಯರ ಆಸ್ತಿಕ ಶ್ರದ್ಧೆ, ಶ್ರಮ ಸಹಿತ ಮುಂದಾಳತ್ವದಲ್ಲಿ ನಿರ್ಮಾಣಗೊಂಡಿತ್ತು. ಹಲವು ಐತಿಹ್ಯಗಳಿಗೆ ಕಾರಣವಾಗಿರುವ ಕ್ಷೇತ್ರವು ಭಕ್ತರ ಇಷ್ಟಾರ್ಥ ಪೂರೈಸುವ ಕ್ಷೇತ್ರವಾಗಿದೆ.

ದೇವಸ್ಥಾನದ ನವೀಕರಣ ಕಾರ್ಯದ ಭಾಗವಾಗಿ ದೇವಸ್ಥಾನದ ಹಿಂಭಾಗದಲ್ಲಿ ಪಾಕಶಾಲೆ ನಿರ್ಮಾಣ ಕಾರ್ಯ ಪೂರ್ಣ ಗೊಂಡಿದೆ. ದೇವಸ್ಥಾನದ ಬಲಪಾರ್ಶ್ವದಲ್ಲಿ ಶೀಟು ಹೊದಿಸಿದ ತಾತ್ಕಾಲಿಕ ಮಂಟ ಪವನ್ನು ನಿರ್ಮಿಸಲಾಗಿದೆ. ಮರದ ಕೆತ್ತನೆ ಕಾರ್ಯ,ನಮಸ್ಕಾರ ಮಂಟಪದ ಮೇಲ್ಛಾವಣಿ, ಅದರ ಒಳಾಂಗಣದ ಮರದ ಕೆತ್ತನೆ ಕಾರ್ಯಗಳು ಅತ್ಯಂತ ಸೂಕ್ಷ್ಮಮತ್ತು ಸುಂದರವಾಗಿದ್ದು, ಯಂತ್ರವನ್ನು ಉಪ ಯೋಗಿಸದೆ ಕೈ ಚಳಕದ ಮೂಲಕ ಕೆತ್ತಲಾಗಿದೆ.

ಗರ್ಭಗುಡಿಯ ಒಳಭಾಗದ ಗೋಡೆಗೆ ಬಣ್ಣ ಬಳಿಯುವ ಕಾರ್ಯ ಸಹಿತ, ಗರ್ಭಗುಡಿಯ ಮಹಾದ್ವಾರದ ಅಕ್ಕಪಕ್ಕದಲ್ಲಿ ಕಲ್ಲಿನಲ್ಲಿ ಕೆತ್ತಲ್ಪಟ್ಟ ಸಿಂಹ ಮುಖ ಸೋಪಾನ ಅಳವಡಿಸಲಾಗಿದೆ. ಒಳಾಂಗಣ ಪ್ರದಕ್ಷಿಣ ಪಥಕ್ಕೆ ಕಲ್ಲು ಹಾಸನ್ನು ಹೊದಿಸುವ ಕಾರ್ಯ ನಡೆಯಬೇಕಿದೆ.ವರ್ಷಾಂತ್ಯದಲ್ಲಿ ದೇವಸ್ಥಾನದ ಬ್ರಹ್ಮಕಲಶ ನಡೆಯಲಿದೆ.

ದೇವಸ್ಥಾನದ ನವೀಕರಣದ ಕೆಲವು ಕೆಲಸಕಾರ್ಯಗಳು ಸ್ಥಳೀಯ ಸಂಘ ಟನೆಗಳ ನೇತೃತ್ವದಲ್ಲಿ ನಡೆದಿವೆ. ಬಾಕಿ ಉಳಿದಿರುವ ಕೆಲಸಕಾರ್ಯಗಳಿಗೆ ಸ್ಥಳೀಯರ ಸಹಕಾರ ಶ್ರಮಸೇವೆಯ ಮೂಲಕ ಮುಂದು ವರಿಯಲಿದೆ. ದೇವಸ್ಥಾನ ಮುಂಭಾಗದ ಅಂಗಣ ಅಗಲೀಕರಣ, ಗರ್ಭಗುಡಿ ಮೇಲ್ಭಾಗದ ಛಾವಣಿಗೆ ತಾಮ್ರದ ಹೊದಿಕೆ ಅಳವಡಿಸುವಿಕೆ, ಗರ್ಭಗುಡಿ ಹೊರಾವರಣಕ್ಕೆ ದೀಪದರಿ ಅಳವಡಿಕೆ, ನಮಸ್ಕಾರ ಮಂಟಪದ ಮೇಲ್ಛಾವಣಿ, ಕಲ್ಲುಹಾಸು ಅಳವಡಿಕೆ ನಡೆಯಲಿದೆ. ಈ ತನಕ ಮರಮಟ್ಟು ಕೆತ್ತನೆ ಕಾರ್ಯ ಸಹಿತ ಅನ್ನಛತ್ರ ನಿರ್ಮಾಣಕ್ಕೆ ಸುಮಾರು 50 ಲಕ್ಷ ರೂ.ವೆಚ್ಚವಾಗಿದ್ದು, ಇನ್ನೂ 40 ಲಕ್ಷ ರೂ.ಗಳಷ್ಟು ವೆಚ್ಚ ತಗಲಬಹುದೆಂದು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here