Home ಧಾರ್ಮಿಕ ಸುದ್ದಿ ಬಸ್ರೋರು ಶ್ರೀ ಮಹಾಲಸಾ ನಾರಾಯಣೀ ದೇಗುಲ

ಬಸ್ರೋರು ಶ್ರೀ ಮಹಾಲಸಾ ನಾರಾಯಣೀ ದೇಗುಲ

1176
0
SHARE

ಬಸ್ರೋರು: ಬಸ್ರೋರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಮಹೋತ್ಸವ ಅ.10 ರಿಂದ 19 ರವರೆಗೆ ನಡೆಯಲಿದೆ. ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀದೇವರಿಗೆ ವಿಶೇಷ ಪೂಜೆ ಪುನಸ್ಕಾರ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಜನೆ, ರಜತ ಪಲ್ಲಕಿ ಸೇವೆ, ರಾತ್ರಿ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅ. 17ರಂದು ದುರ್ಗಾಷ್ಟಮಿ ಪ್ರಯುಕ್ತ ಸಂಜೆ 4 ಗಂಟೆಗೆ ದುರ್ಗಾ ನಮಸ್ಕಾರ ಸೇವೆ, ಅ.22 ರಂದು ಚಂಡಿಕಾ ಹವನ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಲಿದೆ
ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here