ಬಸ್ರೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೌಕೂರಿನಲ್ಲಿ ಮಳೆಗಾಗಿ, ಗ್ರಾಮ ಸುಭಿಕ್ಷೆಗಾಗಿ ರವಿವಾರ ದೇವಸ್ಥಾನ ಮತ್ತು ಗ್ರಾಮಸ್ಥರ ವತಿಯಿಂದ ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಯಿತು.
ಶ್ರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ, ಸದಸ್ಯರಾದ ಎಸ್.ಆನಂತ ಅಡಿಗ, ಭುಜಂಗ ಶೆಟ್ಟಿ ಮುಳ್ಳುಗುಡ್ಡೆ, ಶ್ರೀ ದೇವಸ್ಥಾನದ ಅರ್ಚಕ ವರ್ಗ ಮತ್ತು ಸಿಬಂದಿ, ಗ್ರಾಮಸ್ಥರು, ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.