ಬಸ್ರೂರು: ಕಂದಾವರ ಗ್ರಾಮದ ಜಡ್ಡಿನಕೊಡ್ಲುವಿನಲ್ಲಿ ಶ್ರೀ ದುರ್ಗಾಪರಮೇಶ್ವರೀ, ಶ್ರೀ ಯಕ್ಷೆ ಮಹಾಕಾಳಿ ದೇವಸ್ಥಾನವು ಶ್ರೀ ಬಾಳ್ಕುದ್ರು ನೃಸಿಂಹಾಶ್ರಮ ಸ್ವಾಮೀಜಿ ಮತ್ತು ಮರಕಡದ ಶ್ರೀ ನರೇಂದ್ರನಾಥ ಯೋಗೇಶ್ವರ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಅಷ್ಠ ಬಂಧ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆಯೊಂದಿಗೆ ಜಡ್ಡಿನಕೊಡ್ಲು ಪದ್ಮಾವತಿ ಶ್ರೀನಿವಾಸ ಶೇರೆಗಾರ್ ಕುಟುಂಬ ಮತ್ತು ಅಪಾರ ಸಂಖ್ಯೆಯ ಭಕ್ತರ ಸಹಕಾರದಿಂದ ಲೋಕಾರ್ಪಣೆಗೊಂಡಿತು. ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಿತು.