Home ಧಾರ್ಮಿಕ ಸುದ್ದಿ ಮಹಾಲಸಾ ನಾರಾಯಣಿ ದೇವಸ್ಥಾನ : ಚಂಡಿಕಾ ಹವನ

ಮಹಾಲಸಾ ನಾರಾಯಣಿ ದೇವಸ್ಥಾನ : ಚಂಡಿಕಾ ಹವನ

1166
0
SHARE

ಬಸ್ರೂರು : ಇಲ್ಲಿನ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾದಲ್ಲಿ ನವರಾತ್ರಿ ಪ್ರಯುಕ್ತ ಜರಗುವ ಚಂಡಿಕಾ ಹವನ ಸೇವೆಯು ಶುಕ್ರವಾರ ವಿಜೃಂಭಣೆಯಿಂದ ಜರಗಿತು.

ಬೆಳಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಚಂಡಿಕಾ ಹವನದ ಧಾರ್ಮಿಕ ವಿಧಾನಗಳು ಆರಂಭಗೊಂಡು ಮಧ್ಯಾಹ್ನ ಚಂಡಿಕಾ ಹವನದ ಪೂರ್ಣಾಹುತಿಯೊಂದಿಗೆ ಸಮಾಪನಗೊಂಡಿತು.

ಅನಂತರ ಹರಕೆಯ ಸೀರೆಗಳ ಏಲಂ, ಮಧ್ಯಾಹ್ನ ಪೂಜೆ, ಮಹಾ ಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ವಿಧಿ – ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸೇವಾದಾರರು, ಕುಳಾವಿ ಭಜಕರು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here