ಬಸ್ರೂರು:ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೆ. 29ರಿಂದ ಅ. 8ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ. 6ರಂದು ದುರ್ಗಾಷ್ಟಮಿ, ಸಂಜೆ 4 ಗಂಟೆಗೆ ದುರ್ಗಾದೀಪ ನಮಸ್ಕಾರ ಸೇವೆ, ಅ. 8ರಂದು ವಿಜಯದಶಮಿ, ಸಂಜೆ 6ಕ್ಕೆ ರಜತ ಪಲ್ಲಕಿ ಉತ್ಸವ ಸೇವೆ, ಅ. 11ರಂದು ಚಂಡಿಕಾ ಹವನ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಸಂಜೆ ರಜತ ಪಲ್ಲಕಿ ಉತ್ಸವ ಸೇವೆ, ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ಮಧ್ಯಾಹ್ನ ಪೂಜೆ, ಸಂಜೆ 6.30ರಿಂದ ಭಜನೆ ಸೇವೆ ನಡೆಯಲಿದೆ.
ಮುಂಬಯಿಯ ಭಾವನಾ ಭಾಸ್ಕರ ಪ್ರಭು ಅವರಿಂದ ಸೆ. 29ರಂದು ಬೆಳಗ್ಗೆ 11 ಗಂಟೆಗೆ, ಸೆ. 30ರಿಂದ ಅ. 5ರ ವರೆಗೆ ಸಂಜೆ 4.30ರಿಂದ, ಅ. 6ರಂದು ಬೆಳಗ್ಗೆ
11ರಿಂದ ಮತ್ತು ಅ. 7 ಮತ್ತು ಅ. 8ರಂದು ಸಂಜೆ 4.30ರಿಂದ ಶ್ರೀ ದೇವಿ ಮಹಾತ್ಮೆ ಮತ್ತು ಮೋಹಿನಿ ಅವತಾರ ವಿಷಯದಲ್ಲಿ ಪ್ರವಚನ ಕಾರ್ಯಕ್ರಮ ಜರಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.