Home ಧಾರ್ಮಿಕ ಕಾರ್ಯಕ್ರಮ ಬಸ್ರೂರು : ಕೇಶವೇಂದ್ರತೀರ್ಥ ಸ್ವಾಮೀಜಿಯವರ ಆರಾಧನೆ

ಬಸ್ರೂರು : ಕೇಶವೇಂದ್ರತೀರ್ಥ ಸ್ವಾಮೀಜಿಯವರ ಆರಾಧನೆ

1567
0
SHARE

ಕುಂದಾಪುರ: ಶ್ರೀ ಕಾಶೀ ಮಠ ಗುರು ಪರಂಪರೆಯ ದ್ವಿತೀಯ ಯತಿಗಳಾದ ಶ್ರೀಮತ್‌ ಕೇಶವೇಂದ್ರ ತೀರ್ಥ ಸ್ವಾಮೀಜಿಯವರ 348ನೇ ಪುಣ್ಯತಿಥಿ ಆರಾಧನಾ ಮಹೋತ್ಸವ ಬಸ್ರೂರು ಶ್ರೀ ಕಾಶೀ ಮಠದ ಶಾಖಾ ಮಠದಲ್ಲಿ ಸ್ವಾಮೀಜಿಯವರ ವೃಂದಾವನದಲ್ಲಿ ಜರಗಿತು.

ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು. ಬೆಳಗ್ಗೆ ಗಣಪತಿ ಹವನ, ದೇವತಾ ಅನುಷ್ಟಾನ ಹವನದ ಅನಂತರ ಶ್ರೀ ದೇವರಿಗೆ, ವೃಂದಾವನದಲ್ಲಿ ಪಂಚಾಮೃತ ಅಭಿಷೇಕ ಜರಗಿತು.

ದೇಗುಲದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ ಭಜನ ಮಂಡಳಿ ಕುಂದಾಪುರ, ಶ್ರೀ ಪಟ್ಟಾಭಿ ರಾಮಚಂದ್ರ ಭಜನ ಮಂಡಳಿ ಕೋಟೇಶ್ವರ, ಶ್ರೀ ವೀರ ವಿಠಲ ಭಜನ ಮಂಡಳಿ ಗಂಗೊಳ್ಳಿ, ಶ್ರೀ ರಾಮ ಭಜನ ಮಂಡಳಿ ಕೋಟೇಶ್ವರ ಮುಂತಾದ ಭಜನ ಮಂಡಳಿಗಳಿಂದ ವಿಶೇಷ ಭಜನೆ ಕಾರ್ಯಕ್ರಮ ಜರಗಿತು.

ಗುರು ಗುಣಗಾನದಲ್ಲಿ ಬಸ್ರೂರು ಶ್ರೀ ಕಾಶೀ ಮಠ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಶ್ರೀಧರ ವಿಟ್ಠಲ ಕಾಮತ್‌, ವೇ| ಮೂ| ದಾಮೋದರ ಆಚಾರ್ಯ ಮಾತನಾಡಿದರು.

ಬಸ್ರೂರು ಶ್ರೀ ಕಾಶೀ ಮಠದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಶ್ರೀ ಭುವನೇಂದ್ರ ಬಾಲಕಾಶ್ರಮದ ವಿದ್ಯಾರ್ಥಿಗಳು, ಬಸ್ರೂರು ಜಿಎಸ್‌ಬಿ ಸಮಾಜದ ಸದಸ್ಯರು, ಬಸ್ರೂರು ಶ್ರೀ ವೆಂಕಟರಮಣ ಭಜನ ಸಮಿತಿಯ ಪದಾಧಿಕಾರಿಗಳು, ಯುವಜನ ಸಭಾದ ಸದಸ್ಯರು ಭಾಗವಹಿಸಿದ್ದರು.

ವೇ| ಮೂ| ದಾಮೋದರ ಆಚಾರ್ಯ ಅವರ ನೇತೃತ್ವದಲ್ಲಿ ವೇ| ಮೂ| ಸುರೇಂದ್ರ ಭಟ್‌, ವೇ| ಮೂ| ಸುದರ್ಶನ ಆಚಾರ್ಯ ಅವರಿಂದ ಧಾರ್ಮಿಕ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here