Home ಧಾರ್ಮಿಕ ಸುದ್ದಿ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

ಜ. 31: 'ಸಾಮೂಹಿಕ ಚಂದ್ರಗ್ರಹಣ ಶಾಂತಿ ಹೋಮ'

928
0
SHARE

ಉಡುಪಿ : ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಜ. 31ರಂದು ಸಂಜೆ ‘ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ’ ಗೋಚರಿಸುವುದರಿಂದ ಗ್ರಹಣ ಕಾಲದ ಅರಿಷ್ಟ ಪರಿಹಾರಾರ್ಥವಾಗಿ ಉಡುಪಿ ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜ. 31ರಂದು ಸಂಜೆ 6ಕ್ಕೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರ ಮಾರ್ಗದರ್ಶನದಲ್ಲಿ ‘ಸಾಮೂಹಿಕ ಚಂದ್ರ ಗ್ರಹಣ ಶಾಂತಿ ಹೋಮ’ ನಡೆಯಲಿದೆ.

ಈ ಗ್ರಹಣದಲ್ಲಿ ಪುಷ್ಯ, ಆಶ್ಲೇಷಾ, ಮಘಾ, ಜೇಷ್ಠ, ರೇವತಿ, ಚಿತ್ರಾ, ವಿಶಾಖ ನಕ್ಷತ್ರದವರಿಗೂ, ಕರ್ಕಾಟಕ, ಸಿಂಹ, ಧನು, ಮೇಷ ರಾಶಿಯವರಿಗೂ ಅರಿಷ್ಟವಿದ್ದು, ಸಂಜೆ ಕಾಲದಲ್ಲಿ ಗೋಚರಿಸುವುದರಿಂದ ಈ ದಿನ ಭೋಜನ ನಿಷಿದ್ಧವಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

ಗ್ರಹಣ ಕಾಲ ಭೋಜನ ನಿಷಿದ್ಧ
ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದ ವರೆಗೆ ದೇವರ ಸ್ಮರಣೆ ಮಾಡುವುದರಿಂದ ಅರಿಷ್ಟಾದಿಗಳು ದೂರವಾಗಿ ಸನ್ಮಂಗಲವಾಗುವುದಲ್ಲದೆ, ಹೆಚ್ಚಿನ ಸತ್ಫಲ ದೊರೆಯುವುದು. ಬೇರೆ ದಿನಗಳಲ್ಲಿ ಮಾಡಲ್ಪಡುವ ಹತ್ತು ಜಪಗಳನ್ನು ಗ್ರಹಣ ಕಾಲದಲ್ಲಿ ಮಾಡಿದರೆ ಹತ್ತಕ್ಕೆ ನೂರರಷ್ಟು ಫ‌ಲ ಲಭಿಸುತ್ತದೆ. ಮಂತ್ರ ಸಿದ್ಧಿಸಿಕೊಳ್ಳುವವರಿಗೆ ಗ್ರಹಣ ಕಾಲ ಯೋಗ್ಯವಾಗಿದ್ದು, ಅಶುದ್ಧ, ಸೂತಕ ಇತ್ಯಾದಿಗಳಿದ್ದರೂ ಸಹ ಗ್ರಹಣ ಕಾಲದಲ್ಲಿ ಜಪ ಮಾಡಬಹುದು. ಸಂಜೆ 5.22ಕ್ಕೆ (ಸ್ಪರ್ಶ ಕಾಲ) ಆರಂಭಗೊಳ್ಳಲಿರುವ ಗ್ರಹಣದ ಮಧ್ಯಕಾಲ 7.04 ಆಗಿದ್ದು, 8.46 ಗ್ರಹಣ ಮೋಕ್ಷ ಕಾಲವಾಗಿದೆ. ಗ್ರಹಣ ಕಾಲ ಸಂಜೆ ಆದುದರಿಂದ (ಮೋಕ್ಷ ಕಾಲದ ಅನಂತರ) ರಾತ್ರಿ ಜಪ, ತಪ, ಪೂಜಾದಿಗಳನ್ನು ಪೂರೈಸಿ ಭೋಜನ ಸ್ವೀಕರಿಸಬಹುದು.

ಗ್ರಹಣಾರಂಭದಲ್ಲಿ ಸ್ನಾನ ಮಾಡಿ ದೇವರ ಜಪ ಪ್ರಾರಂಭಿಸಬೇಕು ಹಾಗೆಯೇ ಗ್ರಹಣ ಮೋಕ್ಷ ಕಾಲದ ಅನಂತರ ಪುನಃ ಸ್ನಾನ ಮಾಡಿ ಪೂಜೆ ಮಾಡಬೇಕು. ಅರಿಷ್ಟ ಎದುರಾಗಲಿರುವ ರಾಶಿ, ನಕ್ಷತ್ರದವರು ಗ್ರಹಣ ಕಾಲದಲ್ಲಿ ದೇಗುಲಗಳಿಗೆ ತೆರಳಿ ಎಳ್ಳೆಣ್ಣೆ ಸಮರ್ಪಿಸುವುದು ಉತ್ತಮ. ಗ್ರಹಣ ಕಾಲದಲ್ಲಿ ಅಕ್ಕಿ ಅಥವಾ ಉದ್ದನ್ನು ತೆಗೆದಿರಿಸಿ ಬೆಳಗ್ಗೆ ಗೋವು, ಬಡವರು, ಬ್ರಾಹ್ಮಣರಿಗೆ ದಾನ ಕೊಟ್ಟರೆ ವಿಶೇಷ ಫ‌ಲ ಲಭಿಸಲಿದೆ. ಗ್ರಹಣ ಕಾಲದಲ್ಲಿ ಬೆಳ್ತಿಗೆ ಅಕ್ಕಿ ಮತ್ತು ಉದ್ದು ದಾನ ಮಾಡುವುದು ಶ್ರೇಷ್ಠ.
ಶ್ರೀ ರಮಾನಂದ ಗುರೂಜೀ,
  ಧರ್ಮದರ್ಶಿ

LEAVE A REPLY

Please enter your comment!
Please enter your name here