Home ಧಾರ್ಮಿಕ ಸುದ್ದಿ ಬಾರಕೂರು: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಭೇಟಿ

ಬಾರಕೂರು: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಭೇಟಿ

1348
0
SHARE

ಬ್ರಹ್ಮಾವರ: ಶ್ರೀ ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು ಪಡುಕುತ್ಯಾರಿನಲ್ಲಿ ನಡೆಯುವ 15ನೇ ಚಾತುರ್ಮಾಸ ವೃತಾಚರಣೆ ಪ್ರಯುಕ್ತ ಶುಕ್ರವಾರ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದರು.

ಗುರುಮಠದಲ್ಲಿ ಉಚಿತ ಶಿಕ್ಷಣ, ವೇದಾಭ್ಯಾಸ ನೀಡಲಾಗುತ್ತಿದೆ. ಸಂಸ್ಕೃತಿ, ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಆಶೀರ್ವಚನದಲ್ಲಿ ಹೇಳಿದರು. ಜತೆಗೆ ಸರಸ್ವತಿ ಎಜುಕೇಶನ್‌ ಟ್ರಸ್ಟ್‌ ಪ್ರಾರಂಭಗೊಳ್ಳಲಿದೆ ಎಂದರು.

ದೇವಸ್ಥಾನದ ಆಡಳಿತ ಧರ್ಮದರ್ಶಿ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಠದ ಪ್ರತಿಷ್ಠಾನದ ಅಧ್ಯಕ್ಷ ಸೂರ್ಯಕುಮಾರ್‌ ಆಚಾರ್ಯ, ಕೋಶಾಧಿಕಾರಿ ಯಜ್ಞೇಶ್‌ ಆಚಾರ್ಯ, ಸರಸ್ವತಿ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಸುಧಾಕರ ಆಚಾರ್ಯ, ದೇವಸ್ಥಾನದ ಎರಡನೇ ಮೊಕ್ತೇಸರ ಪ್ರವೀಣ್‌ ಆಚಾರ್ಯ ರಂಗನಕೆರೆ, ಮೂರನೇ ಮೊಕ್ತೇಸರ ರವಿ ಆಚಾರ್ಯ ಕೆಳಾರ್ಕಳಬೆಟ್ಟು ಹಾಗೂ ಸದಸ್ಯರು, ತಂತ್ರಿಗಳಾದ ಲಕ್ಷ್ಮೀಕಾಂತ್‌ ಶರ್ಮಾ, ವೀರಾ ರಾಘವ ಶರ್ಮಾ ಉಪಸ್ಥಿತರಿದ್ದರು. ಗುರುಗಳಿಗೆ ಫಲಪುಷ್ಪ ಸಮರ್ಪಣೆ ಜರಗಿತು. ನಾಗರಾಜ್‌ ಆಚಾರ್ಯ ಕೂರಾಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here