Home ಧಾರ್ಮಿಕ ಸುದ್ದಿ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ-ರಂಗಪೂಜಾದಿ ದೀಪೋತ್ಸವ

ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ-ರಂಗಪೂಜಾದಿ ದೀಪೋತ್ಸವ

2698
0
SHARE

ಬ್ರಹ್ಮಾವರ: ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನ. 24ರಂದು ರಂಗಪೂಜಾದಿ ದೀಪೋತ್ಸವ ಜರಗಲಿದೆ. ನ. 24ರ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾಪೂಜೆ, ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಕಾರ್ತಿಕ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಭಜನೆ ಕಾರ್ಯಕ್ರಮ ಜರಗಲಿದೆ. ನ. 25ರಂದು ತುಲಾ ಭಾರ ಸೇವೆ, ಸಂತರ್ಪಣೆ, ನ. 26ರಂದು ರಾತ್ರಿ ಶ್ರೀ ಕ್ಷೇತ್ರದ ದೈವಗಳ ನೇಮ ನಡೆಯಲಿದೆ.

ಧಾರ್ಮಿಕ ಸಭೆ
ನ. 24ರ ರಾತ್ರಿ 8ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಡುಕುತ್ಯಾರು ಮಠ ಸರಸ್ವತೀ ಪೀಠ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಆಡಳಿತ ಧರ್ಮದರ್ಶಿ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜೋತಿಷ ವಿದ್ವಾನ್‌ ಉಮೇಶ್‌ ಆಚಾರ್ಯ ಪಡೀಲು, ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆಯಂಗಡಿ ಉಪಸ್ಥಿತರಿರುವರು.

ಹಿರಿಯ ಗ್ರಾಮ ಮೊಕ್ತೇಸರರಾದ ಪಿ.ಎನ್‌. ಜಗದೀಶ್‌ ಆಚಾರ್ಯ ನಂದಿಕೂರು, ರವೀಂದ್ರ ಆಚಾರ್ಯ ಮುಂಡ್ಕಿನಜೆಡ್ಡು ಚೇರ್ಕಾಡಿ, ರಮೇಶ ಆಚಾರ್ಯ ಬಳ್ಕೂರು, ಪ್ರಭಾಕರ ಆಚಾರ್ಯ ಮಂದಾರ್ತಿ, ಸುಧಾಕರ ಆಚಾರ್ಯ ಬಡಾನಿಡಿ ಯೂರು ಹಾಗೂ ಸಾಧಕರನ್ನು ಸಮ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here