Home ಧಾರ್ಮಿಕ ಸುದ್ದಿ ಬಾರ್ಕೂರು ವೇಣುಗೋಪಾಲಕೃಷ್ಣ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶ, ನಾಗಮಂಡಲೋತ್ಸವಕ್ಕೆ ಭರದ ಸಿದ್ಧತೆ

ಬಾರ್ಕೂರು ವೇಣುಗೋಪಾಲಕೃಷ್ಣ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶ, ನಾಗಮಂಡಲೋತ್ಸವಕ್ಕೆ ಭರದ ಸಿದ್ಧತೆ

1354
0
SHARE

ಬ್ರಹ್ಮಾವರ: ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರಾದ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ಪರಿವಾರ ದೇವರ ಸನ್ನಿಧಿಯಲ್ಲಿ ಸಮಾಜದ ಅಭ್ಯುದಯಕ್ಕಾಗಿ ಎ.14ರಿಂದ 19ರ ವರೆಗೆ ಅಷ್ಟಬಂಧ ಬ್ರಹ್ಮಕಲಶ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಭರದ ಸಿದ್ಧತೆ ಆರಂಭಗೊಂಡಿದೆ.

ಈ ಧಾರ್ಮಿಕ ಕಾರ್ಯದ ಯಶಸ್ವಿಗಾಗಿ ಸಮಿತಿಯನ್ನು ರಚಿಸಲಾಗಿದ್ದು ವಿವಿಧ ಉಪಸಮಿತಿಗಳ ಮೂಲಕ ಜವಬ್ದಾರಿ ಹಂಚಲಾಗಿದೆ ಮತ್ತು ದೇವತಾಪ್ರಶ್ನೆಯಲ್ಲಿ ಕಂಡು ಬಂದ ಎಲ್ಲಾ ದೋಷಗಳ ನಿವಾರಣೆಗೆ ಪ್ರಾಯಶ್ಚಿತ್ತ ಕಾರ್ಯಗಳನ್ನು ನೆರವೇರಿಸಲಾಗಿದೆ. ದೇವಾಲಯವನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ಅಗಲೀಕರಣ ಹಾಗೂ ಕಾರ್ಯಕ್ರಮಗಳು ನಡೆಯುವ ಸ್ಥಳದ ಸ್ವಚ್ಚತಾ ಕಾರ್ಯ ಪೂರ್ಣಗೊಂಡಿದೆ.

ಪೂರ್ವಭಾವಿ ಸಭೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ| ಮೋಹನ್‌ ಆಳ್ವಾ ಅವರ ಮಾರ್ಗದರ್ಶನದಲ್ಲಿ, ಪ್ರಮುಖರಾದ ಬಾರ್ಕೂರು ಶಾಂತರಾಮ್‌ ಶೆಟ್ಟಿ ಮೊದಲಾದವರ ಉಪಸ್ಥಿತಿಯಲ್ಲಿ, ಸಮಾಜದ ಅಧ್ಯಕ್ಷ ಕೆ. ಗೋಪಾಲ ಅವರ ಅಧ್ಯಕ್ಷತೆಯಲ್ಲಿ, ದೇಗುಲದ ವಠಾರದಲ್ಲಿ ಎರಡು ಪ್ರತ್ಯೇಕ ಸಭೆಗಳನ್ನು ನಡೆಸಿ ಪೂರ್ವ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಯಿತು. ಮೋಹನ್‌ ಆಳ್ವಾ ಅವರು ಕಾರ್ಯಕ್ರಮದ ಯಶಸ್ವಿಗೆ ಅನೇಕ ಉಪಯುಕ್ತ ಮಾರ್ಗದರ್ಶನಗಳನ್ನು ನೀಡಿದರು.

ಎ.18: ನಾಗಮಂಡಲ ಬ್ರಹ್ಮಕಲಶ ಎ.14ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಎ.16ರಂದು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಹಾಗೂ ಎ.18ರಂದು
ಪ್ರಮುಖ ಬ್ರಹ್ಮಕಲಶಾಭಿಷೇಕ, ಚತುಪವಿತ್ರ ನಾಗಮಂಡಲೋತ್ಸವ, ಅನ್ನಸಂತರ್ಪಣೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here