ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾ.23ರಂದು ನಡೆಯುವ ಬ್ರಹ್ಮಕಲ ಶೋತ್ಸವ ಸಮಾರಂಭದ ಪ್ರಚಾರದ ಸ್ಟಿಕ್ಕರ್ಗಳನ್ನು ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.
ದೇವಸ್ಥಾನದ ಮೊಕ್ತೇಸ್ತರ ಎಸ್. ರಾಮಚಂದ್ರ ಭಟ್, ಬ್ರಹ್ಮಲಕಶೋತ್ಸವ ಸಮಿತಿಯ ಅಧ್ಯಕ್ಷ ಎಂ.ನಾರಾಯಣ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ, ದೇಗುಲದ ಅರ್ಚಕ ಪುರುಷೋತ್ತಮ ಭಟ್, ಸಮಿತಿಯ ಸದಸ್ಯರಾದ ಉದಯ ಶೆಟ್ಟಿ ಆದಿದನ್, ಎಂ.ಚಂದ್ರಶೇಖರ ಸುವರ್ಣ, ನಾಗೇಶ್ ಎ. ಬಪ್ಪನಾಡು, ಬರ್ಟೆತೋಟ ಗಂಗಾಧರ ಶೆಟ್ಟಿ, ಮಹೀಮ್ ಹೆಗ್ಡೆ, ಕೃಷ್ಣರಾಜ್ ಬಪ್ಪನಾಡು, ಪುರುಷೋತ್ತಮ ರಾವ್, ಸೀತಾರಾಮ ಭಟ್, ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.