Home ಧಾರ್ಮಿಕ ಸುದ್ದಿ ಬಪ್ಪನಾಡು ದೇವಸ್ಥಾನ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಕಾರ್ಯಕ್ರಮ

ಬಪ್ಪನಾಡು ದೇವಸ್ಥಾನ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಕಾರ್ಯಕ್ರಮ

1345
0
SHARE

ಮೂಲ್ಕಿ : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕಾರ್ಯಕ್ರಮದ ಎರಡನೇ ದಿನದಲ್ಲಿ ದೇವಸ್ಥಾನದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ಪುತ್ತೂರು ಮಧುಸೂಧನ ತಂತ್ರಿ ತೊಟ್ಟಂ, ಕಟೀಲು ಶ್ರೀ ವೆಂಕಟ್ರಮಣ ಆಸ್ರಣ್ಣ ಇವರ ಉಪಸ್ಥಿತಿಯಲ್ಲಿ ಪುಣ್ಯಾಹ ವಾಚನ ಮತ್ತು ದೇವನಾಂದಿ ಅರಣಿ ಮಥನ ನಡೆದು ಅಗ್ನಿ ಜನನ ಹಾಗೂ ವಿವಿಧ ಹೋಮಗಳೊಂದಿಗೆ, ಅಂಕುರಾರೋಪಣಾ ವಾಸ್ತು ಶುದ್ಧ ಮತ್ತು ಬಲಿ ಶ್ರೀದುರ್ಗಾ ನಮಸ್ಕಾರ ಪೂಜೆ ನಡೆಯಿತು.

ಮೂಲ್ಕಿ ಸೀಮೆಯರಸರು ಹಾಗೂ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ದೇವಸ್ಥಾನದ ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಆಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಮಾಜಿ ಆಡಳಿತ ಮೊಕ್ತೇ ಸ ರ ಹರಿ ಕೃಷ್ಣ ಪುನರೂರು, ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆಶೇಖರ್‌ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಅರ್ಚಕರಾದ ಬಿ. ಕೃಷ್ಣದಾಸ ಭಟ್‌, ಶ್ರೀಪತಿ ಉಪಾಧ್ಯಾಯ, ಅತ್ತೂರುಬೈಲು ಉಡುಪ, ಬಿ. ನರಸಿಂಹ ಭಟ್‌, ಗೋಪಾಲಕೃಷ್ಣ ಭಟ್‌, ಪ್ರಧಾನ ಕಾರ್ಯದರ್ಶಿ ಸುನೀಲ್‌ ಆಳ್ವ , ಉಪಾಧ್ಯಕ್ಷ ರಾದ ಎಚ್‌.ವಿ. ಕೋಟ್ಯಾನ್‌, ಕರುಣಾಕರ ಶೆಟ್ಟಿ, ವೆೈದಿಕ ಸಮಿತಿಯ ಅತುಲ್‌ ಕುಡ್ವಾ, ಪಂಜ ಭಾಸ್ಕರ ಭಟ್‌, ಹಯಗ್ರೀವ ಪಡಿಲ್ಲಾಯ, ಕೃÅಷ್ಣರಾಜ ಭಟ್‌ ಮತ್ತಿತರರು ಉಪಸ್ಥಿತರಿದ್ದರು.ಮಧ್ಯಾಹ್ನದ ಅನ್ನ ಪ್ರಸಾದ ವಿತರಣೆಯ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಭಾಗವಹಿಸಿದರು.

ಮಾ. 16ರಂದು ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಹವನ, ಬಲಿ ಕಲ್ಲುಗಳ ಪ್ರತಿಷ್ಠೆ ಹಾಗೂ ದುರ್ಗಾ ನಮಸ್ಕಾರ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ.  ಇಂದಿನಿಂದ (ಮಾ.16) ದೇವಸ್ಥಾನದಲ್ಲಿ ಧಾರ್ಮಿಕ ಸಬಾ ಕಾರ್ಯಕ್ರಮ ನಡೆಯಲಿದ್ದು, ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಕ್ಷನಾಟ್ಯ ಗಾನವೈಭವ ಮತ್ತು ಭಕ್ತಿ ಗೀತೆ ಕಾರ್ಯಕ್ರಮ ನಡೆಯುವುದು. ನಗರದ ಎಲ್ಲೆಡೆ ವಿವಿಧ ಸಂಸ್ಥೆಗಳು ಅಲಂಕಾರ ಕಾರ್ಯಕ್ರಮ ಆರಂಭವಾಗಿದೆ.

LEAVE A REPLY

Please enter your comment!
Please enter your name here