Home ಧಾರ್ಮಿಕ ಸುದ್ದಿ ಬಪ್ಪನಾಡು ದೇವಸ್ಥಾನ: ಜಳಕದ ಕೆರೆ ಸಮರ್ಪಣೆ

ಬಪ್ಪನಾಡು ದೇವಸ್ಥಾನ: ಜಳಕದ ಕೆರೆ ಸಮರ್ಪಣೆ

1828
0
SHARE

ಮೂಲ್ಕಿ : ದೇವಸ್ಥಾನಗಳು ಮತ್ತು ದೇವರ ಸಾನಿಧ್ಯ ಇರುವ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಬೆಳಗಿಸುವ ಕೆಲಸ ನಡೆದಾಗ ಆ ಗ್ರಾಮದ ಸರ್ವ ಜನರಿಗೂ ಕ್ಷೇಮಕರ ವಾತಾವರಣ ನಿರ್ಮಾಣವಾಗಿ, ಈ ಮೂಲಕ ದೇವರ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರು ಹೇಳಿದರು.

ನವೀಕರಣಗೊಂಡ ಬಪ್ಪನಾಡು ಚಂದ್ರಶ್ಯಾನುಭಾಗರ ಕುದ್ರುವಿನ ಅದಮಾರು ಮಠದ ಸಾನಿಧ್ಯದಲ್ಲಿರುವ ಬಪ್ಪನಾಡು ದೇವರ ಹಾಗೂ ಪರಿವಾರದ ದೇವರ ಜಳಕದ ಕೆರೆಯ ಸಮರ್ಪಣಾ ವಿಧಿವಿಧಾನಗಳು, ಬಳಿಕ ದೇವರಿಗೆ ಮಂಗಳಾರತಿ ರವಿವಾರ ನಡೆಯಿತು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಅವರು ಆಶೀರ್ವಚನ ನೀಡಿದರು.

ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಎಂ. ಅತುಲ್‌ ಕುಡ್ವಾ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬಪ್ಪನಾಡು ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಸೀಮೆಯರಸರಾದ ದುಗ್ಗಣ್ಣ ಸಾವಂತರು, ದೇವಸ್ಥಾನದ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಹರಿಕೃಷ್ಣ ಪುನರೂರು, ಕಾರ್ಯನಿರ್ವಹಣಾಧಿಕಾರಿ ಜಯಮ್ಮಾ ಪಿ., ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನೀಲ್‌ ಆಳ್ವ, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳಾದ ದೊಡ್ಡಮನೆ ಯು. ವಸಂತ ಶೆಣೈ , ಎಂ. ನಾರಾಯಣ ಶೆಣೈ, ಯು. ಬಾಬುರಾಯ ಶೆಣೈ, ವಾಸುದೇವ ಆರ್‌. ಕುಡ್ವಾ, ಡಾ| ಎಂ.ಎ.ಆರ್‌. ಕುಡ್ವಾ, ದೇವಪ್ರಸಾದ್‌ ಪುನರೂರು, ಪದ್ಮಾ ವಿ. ಕುಡ್ವಾ, ವಿ. ಶಿವರಾಮ ಕಾಮತ್‌, ಕೆ. ಸತೀಶ್‌ ಭಂಡಾರಿ, ಮಾಧವ ಸನಿಲ್‌, ಕೆ.ಸಿ. ಕಾಮತ್‌, ಎಂ. ಚಂದ್ರಶೇಖರ ಸುವರ್ಣ, ನಾಗೇಶ್‌ ಬಪ್ಪನಾಡು, ಲೀಲಾಕ್ಷ ಕರ್ಕೆರಾ, ಮೋಹನ್‌ದಾಸ್‌, ಸುರೇಶ್‌ ಕರ್ಕೆರ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here