Home ಧಾರ್ಮಿಕ ಸುದ್ದಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಮಲ್ಲಿಗೆ ಸಮರ್ಪಣೆ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಮಲ್ಲಿಗೆ ಸಮರ್ಪಣೆ

2601
0
SHARE

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಂಗಳವಾರ ನಡೆದ ಹಗಲು ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀದೇವಿ ಶಯನೋತ್ಸವಕ್ಕೆ ಭಕ್ತರು ಚೆಂಡು ಮಲ್ಲಿಗೆ ಹೂವನ್ನು ಸಮರ್ಪಿಸಿ ತಮ್ಮ ಸೇವೆಯನ್ನು ಸಲ್ಲಿಸಿದರು.

ಸುಮಾರು 70 ಸಾವಿ ರಕ್ಕೂ ಅಧಿಕ ಭಕ್ತರು ಹೂವಿನ ಸೇವೆ ನೆರವೇರಿಸಿದರು. ಈ ಸೇವೆಯು ಪ್ರತಿಯೊಬ್ಬ ಭಕ್ತರ ನೆಮ್ಮದಿಗಾಗಿ ದೇವಿಗೆ ಹೂ ಸಮರ್ಪಿಸುವುದು ಅನಾದಿಕಾದಿಂದಲೂ ವಾಡಿಕೆಯ ರೂಪದಲ್ಲಿ ನಡೆ ದು  ಬಂದಿದೆ. ಮಾಗಣೆಯ 32 ಗ್ರಾಮಗಳಿಗೂ ವ್ಯಾಪ್ತಿಯ ಜನರು ಜಾತಿ ಮತಗಳ ಅಂತರವಿಲ್ಲದೆ ಸೇವೆ ಸಲ್ಲಿಸುವುದು ವಿಶೇಷ.

ತಡರಾತ್ರಿಯವರೆಗೂ ಸ್ವೀಕರಿಸಿದ ಮಲ್ಲಿಗೆ ಹೂವನ್ನು ದೇವಿಯ ಗರ್ಭ ಗುಡಿಯೊಳಗೆ ಹರಡಿ ಬಿಡಿಸಲಾಗು ವುದು. ಅನಂತರ ಕವಾಟ ಬಂಧನ ಶಯನೋತ್ಸವ ನಡೆಯುತ್ತದೆ. ಬುಧವಾರ ರಥೋತ್ಸವದಂದು ಬೆಳಿಗ್ಗೆ ಕವಾಟೋಧ್ಘಾಟನೆ ಕಾರ್ಯಕ್ರಮ ವಿಶೇಷ ಪೂಜೆಯೊಂದಿಗೆ ನಡೆದು ಸ್ವೀಕರಿಸಿದ ಮಲ್ಲಿಗೆಯನ್ನು ಪ್ರಸಾದ ರೂಪದಲ್ಲಿ ಸಮರ್ಪಿಸಿದವರಿಗೆ ಅಲ್ಲದೆ ಇತರ ಭಕ್ತರಿಗೂ ವಿತರಿಸಲಾಗುತ್ತದೆ.

LEAVE A REPLY

Please enter your comment!
Please enter your name here