ಶಾಂಭವಿ ನದೀ ತಟದಲ್ಲಿ ನೆಲೆಯಾಗಿರುವ ದುರ್ಗಾಪರಮೇಶ್ವರಿ ದೇವಿಯು ಭಕ್ತಾಭೀಷ್ಟಪ್ರದಾಯಕಿಯಾಗಿ ಕಂಗೊಳಿಸುತ್ತಿದ್ದಾಳೆ. ಮುಸ್ಲಿಂ ವ್ಯಾಪಾರಿಯಾಗಿದ್ದ ಬಪ್ಪ ಸಾಹುಕಾರ ಎಂಬವರಿಗೆ ದೇವಿ ಒಲಿದಳೆಂಬ ಐತಿಹ್ಯವನ್ನು ಈ ಕ್ಷೇತ್ರವು ಹೊಂದಿದೆ. ಇನ್ನು ಬಪ್ಪನಾಡು ಡೋಲು ಸಹ ವಿಶ್ವಪ್ರಸಿದ್ಧವಾಗಿದೆ. ಮಲ್ಲಿಗೆ ಪ್ರಿಯೆಯಾಗಿರುವ ಇಲ್ಲಿನ ದೇವಿಯು ತನ್ನ ಭಕ್ತರಿಂದ ವಿವಿಧ ರೀತಿಯ ಸೇವೆಗಳನ್ನು ಪಡೆದುಕೊಳ್ಳುತ್ತಾ ಈ ಕ್ಷೇತ್ರದಲ್ಲಿ ವಿರಾಜಮಾನಳಾಗಿದ್ದಾಳೆ. ಊರಿನ ಮತ್ತು ಪರ ಊರಿನ ಲಕ್ಷಾಂತರ ಭಕ್ತರ ಆರಾಧ್ಯ ದೇವಿಯಾಗಿ ಪ್ರಸಿದ್ಧಿಯನ್ನು ಪಡೆದಿರುವ ದುರ್ಗಾಪರಮೇಶ್ವರಿಯು ನಾಡಿಗೆ ಒದಗಿರುವ ಸಂಕಟವನ್ನು ಕಳೆದು ಸನ್ಮಂಗಲವನ್ನುಂಟುಮಾಡಲಿ ಎಂಬ ಪ್ರಾರ್ಥನೆಯೊಂದಿಗೆ ತಾಯಿಯ ನಿತ್ಯಪೂಜಾ ದರ್ಶನ ನಿಮಗಾಗಿ.
Home ಧಾರ್ಮಿಕ ಕ್ಷೇತ್ರಗಳು ಪುಷ್ಪ ಪ್ರಿಯೆ, ಲಿಂಗ ರೂಪಿಣಿ Bappanadu Shree Durgaparameshwari ಅಮ್ಮನವರ ನಿತ್ಯಪೂಜಾ ದರ್ಶನ | Udayavani