ಮೂಲ್ಕಿ : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾ.14ರಿಂದ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ನಡೆಯ ಬೇಕಾದ ವಿವಿಧ ಧಾರ್ಮಿಕ ವಿಧಿವಿಧಾನಗಳು ಮುಂಜಾನೆಯಿಂದ ಆರಂಭವಾಯಿತು.
ಮುಂದಿನ ಎಲ್ಲ ವಿಧಿ ವಿಧಾನಗಳ ಕಾರ್ಯಕ್ರಮಗಳ ನೇತೃತ್ವ ವಹಿಸಿಕೊಂಡಿರುವ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿ, ಬ್ರಹ್ಮಶ್ರೀ ಪುತ್ತೂರು ಮಧುಸೂಧನ ತಂತ್ರಿ ತೊಟ್ಟಂ ಮತ್ತು ಪಂಜ ಭಾಸ್ಕರ ಭಟ್ ಹಾಗೂ ಯತ್ವಿಜರನ್ನು ದೇವಸ್ಥಾನದ ಆಡಳಿತೆಯ ಪರವಾಗಿ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಕಾರ್ಯನಿರ್ವಹಣಾಧಿಕಾರಿ ಬಿ.ಜಯಮ್ಮ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷಎಂ.ನಾರಾಯಣ ಶೆಟ್ಟಿ, ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ ಹಾಗೂ ಇನ್ನಿತರ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿ, ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಕರೆತಂದರು.
ಕಟೀಲು ಕ್ಷೇತ್ರದ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ತೋರಣ ಮೂಹೂರ್ತವನ್ನು ನೆರವೇರಿಸಿಕೊಟ್ಟರು.
ಮುಂದಿನ 10 ದಿನಗಳ ಕಾಲ ನಿರಂತರವಾಗಿ ನಡೆಯುವ ಅನ್ನದಾನಕ್ಕೆ ಬೇಕಾದ ಸಕಲ ಸವಲತ್ತುಗಳ ಸಂಗ್ರಹಣ ಕೇಂದ್ರದಲ್ಲಿ ಉಗ್ರಾಣ ಮೂಹೂರ್ತವನ್ನು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತೆ ಮೊಕ್ತೇಸರ ಪುನರೂರು ಪಠೇಲ್ ವೆಂಕಟೇಶ್ ರಾವ್, ಏಳಿಂಜೆ ಶ್ರೀ ಲಕ್ಷ್ಮಿಜನಾರ್ದನ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ ಕೊಂಜಾಲು ಗುತ್ತು, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ದರ್ಶನ ಪಾತ್ರಿ ಶ್ರೀ ಸತ್ಯನಾರಾಯಣ ನಾಯಕ್ ಫಲಿಮಾರ್ಕರ್ ನೆರವೇರಿಸಿದರು.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ದೇವಸ್ಥಾನದ ಮಾಜಿ ಮೊಕ್ತೇಸರ ಹರಿಕೃಷ್ಣ ಪುನರೂರು, ಸಮಿತಿಯ ಗೌರವಾಧ್ಯಕ್ಷ ಪಾದೆ ಮನೆ ಜಯಂತ್ ರೈ, ಎಂ.ಎಚ್.ಅರವಿಂದ ಪೂಂಜ, ಉಪಾಧ್ಯಕ್ಷರಾದ ಎಚ್.ವಿ.ಕೋಟ್ಯಾನ್, ಬಾಳದ ಗುತ್ತು ಕರುಣಾಕರ ಶೆಟ್ಟಿ, ಸದಸ್ಯರಾದ ಬಿ.ದೊಡ್ಡಣ್ಣ ಮೊಲಿ, ಅತ್ತೂರು ಬೈಲು ಮನೆ ವೆಂಕಟರಾಜ ಉಡುಪ, ಧನಂಜಯ ಮಟ್ಟು,ಅತುಲ್ ಕುಡ್ವಾ, ಸಂತೋಷ್ ಕುಮಾರ್ ಹೆಗ್ಡೆ, ಬಿ.ಸೂರ್ಯ ಕುಮಾರ್, ಯದುನಾರಾಯಣ ಶೆಟ್ಟಿ, ಚೆನ್ನಪ್ಪ ಬಿ.ಎಸ್., ಬೂಬ ಶೆಟ್ಟಿಗಾರ್, ಗುರುವಪ್ಪ ಕೋಟ್ಯಾನ್, ಉದಯ ಕುಮಾರ್ ಶೆಟ್ಟಿ ಆದಿಧನ್, ಕೊಲಾ°ಡು ಗುತ್ತು ರಾಮಚಂದ್ರ ನಾಯಕ್, ಕೆ.ಕೃಷ್ಣ ಆರ್. ಶೆಟ್ಟಿ ಮತ್ತು ಇತರ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.