ಮೂಲ್ಕಿ: ಬಪ್ಪನಾಡು ದೇವಸ್ಥಾನದಲ್ಲಿ ಕ್ಷೇತ್ರದ ಬಹುದಿನಗಳ ಕನಸಿನ ಯೋಜನೆ ನಿತ್ಯ ಅನ್ನದಾನ ಕಾರ್ಯಕ್ರಮ ವಿಶೇಷ ಪ್ರಾರ್ಥನೆಯೊಂದಿಗೆ ಮೇ 7ರಿಂದ ಆರಂಭಗೊಂಡಿತು.
ಮುಂಜಾನೆ ದೃಢ ಕಳಸ ಕಾರ್ಯಕ್ರಮದ ನಿಮಿತ್ತ ದೇವ ಸ್ಥಾನದಲ್ಲಿ ವಿಶೇಷ ಹೋಮ ಹವನಗಳು ಹಾಗೂ ಪೂಜೆಗಳು ಹಾಗೂ ದೇವರಿಗೆ ವಿಶೇಷ ಕಲಶಾಭಿಶೇಕ ದೇಗುಲ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.
ದೇವಸ್ಥಾನದ ಆಡಳಿತ ಮೋಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ ಹಾಗೂ ಸೀಮೆಯರಸರಾದ ದುಗ್ಗಣ್ಣ ಸಾವಂತರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ಬಿ. ಹಾಗೂ ಇತರ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಮೊದಲಿಗೆ ದೇವಸ್ಥಾನದ ಬಳಿಯಲ್ಲೇ ಇರುವ ಯಾಗ ಶಾಲೆಯಲ್ಲಿ ಹೊರ ಊರಿನ ಭಕ್ತರಿಗೆ ಮತ್ತು ನಿತ್ಯ ಸೇವೆಯ ಭಕ್ತರಿಗೆ ಈ ಯೋಜನೆಯು ನಡೆಯಲಿದ್ದು, ಪ್ರತಿ ಶುಕ್ರವಾರ ಎಂದಿನಂತೆ ಅನ್ನಸಂತರ್ಪಣೆ ನಡೆಯಲಿದೆ.