Home ಧಾರ್ಮಿಕ ಸುದ್ದಿ ‘ಸತ್ಸಂಪ್ರದಾಯ ಅರಿವಿನಿಂದ ಸ್ವಸ್ಥ ಸಮಾಜ ನಿರ್ಮಾಣ’

‘ಸತ್ಸಂಪ್ರದಾಯ ಅರಿವಿನಿಂದ ಸ್ವಸ್ಥ ಸಮಾಜ ನಿರ್ಮಾಣ’

ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರ: ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ

779
0
SHARE
ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವನ್ನು ಹಿರಿಯ ವೈದ್ಯ ಡಾ| ವಸಂತ ಬಾಳಿಗಾ ಉದ್ಘಾಟಿಸಿದರು.

ಬಂಟ್ವಾಳ : ವೇದ, ಪುರಾಣ, ರಾಮಾಯಣ ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಪ್ರಾಚೀನ ದಾಖಲೆಗಳಾಗಿವೆ. ಇವುಗಳ ಅರಿವನ್ನು ಈಗಿನ ಮಕ್ಕಳಿಗೆ ಧಾರ್ಮಿಕ ಕೇಂದ್ರಗಳಲ್ಲಿ ಪ್ರವಚನ, ಹರಿಕಥೆ ಮೂಲಕ ನೀಡುವ ವ್ಯವಸ್ಥೆ ಆಗಬೇಕು. ಹಿಂದೂ ಸತ್ಸಂಪ್ರದಾಯಗಳನ್ನು ತಿಳಿಸುವುದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹಿರಿಯ ವೈದ್ಯ ಡಾ| ವಸಂತ ಬಾಳಿಗಾ ಹೇಳಿದರು.

ಆ. 3ರಂದು ಬಿ.ಸಿ. ರೋಡ್‌ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಶಂಕರ ಸೇವಾ ಪ್ರತಿಷ್ಟಾನ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಏರ್ಪಡಿಸಲಾದ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಪ್ರಧಾನ ಅರ್ಚಕ ವೇ| ಮೂ| ಎಂ. ಈಶ್ವರ ಭಟ್ ಕೈಯೂರು ಮಾತನಾಡಿ, ಕಲಿಯುಗದಲ್ಲಿ ಮನುಷ್ಯ ಸರ್ವ ಪಾಪವನ್ನು ಕಳೆದು ಪುಣ್ಯವಂತರಾಗಲು ಪುರಾಣ ಶ್ರವಣ ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜಾಗೃತಿ ಮೂಡಿಸಲು ಪ್ರವಚನ ಪ್ರೇರಕವಾಗಿದೆ ಎಂದರು.

ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಕೈಯೂರು ನಾರಾಯಣ ಭಟ್ ಭಾಗವತ ಪ್ರಚನವನ್ನು ನಡೆಸಿಕೊಟ್ಟರು.

ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ ವೇದವ್ಯಾಸ ರಾಮಕುಂಜ, ಪರಮೇಶ್ವರ ಹೊಳ್ಳ ಅಲೆತ್ತೂರು, ಸತ್ಯನಾರಾಯಣ ರಾವ್‌, ಕಮಲಾಕ್ಷ ಮಂಜೇಶ್ವರ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಜಯಾನಂದ ಪೆರಾಜೆ ಸ್ವಾಗತಿಸಿ, ಪ್ರಸ್ತಾವಿಸಿದರು. ಸಂಚಾಲಕ ಕೃಷ್ಣ ಶರ್ಮ ವಂದಿಸಿದರು. ಉಪನ್ಯಾಸಕ ವಿ. ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.

ಧಾರ್ಮಿಕ ಚಿಂತನೆ

ಧಾರ್ಮಿಕ ಚಿಂತನೆ, ವಿಚಾರಗಳು ಪ್ರವಚನ ಸಪ್ತಾಹ ಮೂಲಕ ಜನಸಾಮಾನ್ಯರಿಗೆ ಸಿಗಲು ಸಾಧ್ಯವಾಗುವುದು. ಏಳು ದಿನಗಳ ಕಾಲ ದಿನಂಪ್ರತಿ ಸಂಜೆ 6.30ರಿಂದ ರಾತ್ರಿ 8ರ ವರೆಗೆ ನಡೆಯುವ ಪ್ರವಚನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಬೇಕು.
ಡಾ| ವಸಂತ ಬಾಳಿಗಾ,
ಹಿರಿಯ ವೈದ್ಯರು

LEAVE A REPLY

Please enter your comment!
Please enter your name here