Home ಧಾರ್ಮಿಕ ಕಾರ್ಯಕ್ರಮ ಗರ್ಭಗುಡಿ ಪ್ರವೇಶ ದ್ವಾರ ಪ್ರತಿಷ್ಠೆ

ಗರ್ಭಗುಡಿ ಪ್ರವೇಶ ದ್ವಾರ ಪ್ರತಿಷ್ಠೆ

ಬಂಟ್ವಾಳ: ಕಾರಂಬಡೆ ಕ್ಷೇತ್ರ ಪುನರ್‌ ನಿರ್ಮಾಣ

1293
0
SHARE
ಗರ್ಭಗುಡಿ ಪ್ರವೇಶ ದ್ವಾರ ಪ್ರತಿಷ್ಠೆ ನೆರವೇರಿತು

ಬಂಟ್ವಾಳ: ಪುನರ್‌ ನಿರ್ಮಾಣಗೊಳ್ಳುತ್ತಿರುವ ಬಿ. ಕಸ್ಬಾ ಗ್ರಾಮ ಕಾರಂಬಡೆ ಶ್ರೀಮಹಾಮ್ಮಾಯಿ ಕ್ಷೇತ್ರದಲ್ಲಿ ಗರ್ಭಗುಡಿ ಪ್ರವೇಶ ದ್ವಾರ ಪ್ರತಿಷ್ಠೆಯು ಶುಕ್ರವಾರ ಬೆಳಗ್ಗೆ ಕ್ಷೇತ್ರದ ಗೌರವಾಧ್ಯಕ್ಷ ಮತ್ತು ಪುರೋಹಿತ ಕೇಶವ ಶಾಂತಿ ನಾಟಿ ನೇತೃತ್ವದಲ್ಲಿ ನೆರವೇರಿತು.

ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ಶ್ರೀ ಮಹಮ್ಮಾಯಿ ಅಮ್ಮ ನವರಿಗೆ ನೂತನ ಗರ್ಭಗುಡಿ ಸಹಿತ ಪರಿವಾರ ದೈವದೇವರಿಗೆ ನೂತನ ಸಾನ್ನಿಧ್ಯ ನಿರ್ಮಿಸಲು ಸಂಕಲ್ಪಿಸ ಲಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ನೂತನ ಸಾನ್ನಿಧ್ಯಗಳ ಪ್ರವೇಶ ದ್ವಾರ ಪ್ರತಿಷ್ಠೆಯನ್ನು ಊರ-ಪರವೂರ ಭಕ್ತರ ಸಮಕ್ಷಮದಲ್ಲಿ ನೆರವೇರಿಸಲಾಯಿತು.

ಮಾಜಿ ಸಚಿವ ಬಿ. ರಮಾನಾಥ ರೈ, ಪ್ರಮುಖರಾದ ಬೇಬಿ ಕುಂದರ್‌, ವಾಸು ಪೂಜಾರಿ ಲೊರೆಟ್ಟೋ, ಆನು ವಂಶೀಯ ಆಡಳಿತ ಮೊಕ್ತೇಸರ ಅರುಣ್‌ ಕುಮಾರ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್‌ ಕೋಟ್ಯಾನ್‌ ಕುದನೆ, ಪ್ರಧಾನ ಕಾರ್ಯದರ್ಶಿ ನಗೇಶ್‌ ದರ್ಬೆ, ಕೋಶಾಧಿಕಾರಿ ಜಯ ಶಂಕರ ಕಾನ್ಸಾಲೆ, ಸಲಹೆಗಾರ ರಾದ ಸಂತೋಷ್‌ ಕಮಾರ್‌ ಕೊಟ್ಟಿಂಜ, ಗೋಪಾಲ ಅಂಚನ್‌, ಶ್ರೀ ಮಹಾ ಮ್ಮಾಯಿ ಕ್ಷೇತ್ರ ಪ್ರತಿಷ್ಠಾನದ ಅಧ್ಯಕ್ಷ ಕೊರಗಪ್ಪ ಕೊಲಂಬೆಬೈಲು, ಸಮಿತಿ ಪದಾಧಿಕಾರಿಗಳಾದ ಮಚ್ಚೇಂದ್ರ ಸಾಲ್ಯಾನ್‌, ವಾಮನ ಕುಲಾಲ್ ಜಕ್ರಿಬೆಟ್ಟು, ಭಾಸ್ಕರ ಅಜೆಕಲ, ಗಂಗಾಧರ ಸಾಮಾನಿ ದರ್ಬೆ, ಮರದ ಶಿಲ್ಪಿ ಪ್ರವೀಣ್‌ ಅಮೀನ್‌, ವೆಂಕಪ್ಪ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿಚಂದ್ರ ಬರ್ದೆಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here