ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಘಟಕ ಮತ್ತು ಕ್ಯಾಂಪಸ್ ವಿಂಗ್ ಆಶ್ರಯದ 5ನೆ ವರ್ಷದ ರಮ್ಜಾನ್ ಪ್ರಯುಕ್ತ ಈದ್ ಕಿಟ್ ವಿತರಣೆ ಹಾಗೂ ಶಾಲಾ-ಮದ್ರಸ ವಿದ್ಯಾರ್ಥಿಗಳಿಗೆ ಸಮ್ಮಾನ ಕಾರ್ಯ ಕ್ರಮ ಜೂ. 2ರಂದು ಘಟಕ ಅಧ್ಯಕ್ಷ ಇಸ್ಮಾಯಿಲ್ ಅರಬಿ ಅಧ್ಯಕ್ಷತೆಯಲ್ಲಿ ಬಂಟ್ವಾಳ ಪೇಟೆಯ ಶೈಮ್ ಅಪಾರ್ಟ್ ವಠಾರದಲ್ಲಿ ನಡೆಯಿತು.
ಬಂಟ್ವಾಳ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಡ್ಯಾರ್ ಕಣ್ಣೂರು ಜುಮಾ ಮಸೀದಿಯ ಮುದರ್ರಿಸ್ ಅನ್ಸಾರ್ ಫೈಝಿ ತೌಬಾ ವಿಷಯದ ಕುರಿತು ಮುಖ್ಯ ಪ್ರಭಾಷಣ ಮಾಡಿದರು. ಇರ್ಶಾದ್ ದಾರಿಮಿ ದುಆಃ ನೆರವೇರಿಸಿದರು
ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಈದ್ ಕಿಟ್ ವಿತರಿಸಿದರು. ಇದೇ ಸಂದರ್ಭ ಅವರನ್ನು ಸಮ್ಮಾನಿಸ ಲಾಯಿತು.
ಪ್ರಶಸ್ತಿ ಪ್ರದಾನ
ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ 16 ಮಂದಿ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿ ಸೆನೆಟ್ ಸದಸ್ಯ ರಿಯಾಝ್ ಹುಸೈನ್ ಪ್ರಶಸ್ತಿ ನೀಡಿ ಗೌರವಿಸಿದರು.
ಮದ್ರಸ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಮನಾರುಲ್ ಇಸ್ಲಾಂ ಮದ್ರಸದ 16 ವಿದ್ಯಾರ್ಥಿಗಳಿಗೆ ಬಂಟ್ವಾಳ ಜಮಾಅತ್ ಕಮಿಟಿ ಅಧ್ಯಕ್ಷ ಹೈದರ್ ಅಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಬಂಟ್ವಾಳ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಮಾಸ್ಟರ್, ಮಸೀದಿಯ ಖತೀಬ್ ಅಬ್ದುಲ್ ಹನೀಫಿ, ಸದರ್ಮುಹಲ್ಲಿ ಸಿದ್ದೀಕ್ ರಹ್ಮಾನಿ, ಶೈಮ್ ಗ್ರೂಪ್ ಮಾಲಕ ಮುಹಮ್ಮದ್ ಇಕ್ಬಾಲ್, ಬಿ.ಎಂ. ಬದ್ರುದ್ದೀನ್ ಉಪಸ್ಥಿತರಿದ್ದರು. ಜಮಾಅತ್ನ 50 ಮನೆಗಳಿಗೆ ಈದ್ ಕಿಟ್ ವಿತರಿಸಲಾಯಿತು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಘಟಕದ ಉಪಾಧ್ಯಕ್ಷ ಅನ್ವರ್ ಅಝØರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ವಂದಿಸಿದರು. ಸಂಘಟನ ಕಾರ್ಯದರ್ಶಿ ಎಂ. ಸವಾಝ್ ಬಂಟ್ವಾಳ ಸಹಕರಿಸಿದರು.