Home ಧಾರ್ಮಿಕ ಸುದ್ದಿ ಪ್ರಕೃತಿ ಉಳಿಸುವ ಸಂಕಲ್ಪ ಮಾಡೋಣ: ಒಡಿಯೂರು ಶ್ರೀ

ಪ್ರಕೃತಿ ಉಳಿಸುವ ಸಂಕಲ್ಪ ಮಾಡೋಣ: ಒಡಿಯೂರು ಶ್ರೀ

ವರುಣ ಕೃಪೆಗಾಗಿ ಅಭಿಷೇಕ

206
0
SHARE

ಬಂಟ್ವಾಳ: ಪ್ರಕೃತಿಯನ್ನು ಉಳಿಸುವ ಸಂಕಲ್ಪವನ್ನು ನಾವು ಮಾಡಬೇಕು. ಪರ್ವತಗಳ ಅಡಿಭಾಗದಲ್ಲಿರುವ ಶಿಲಾಪಾತ್ರೆಯಲ್ಲಿ ಮಳೆ ನೀರು ಸಂಗ್ರಹಗೊಂಡು ವರ್ಷ ಪೂರ್ತಿ ನೀರಿನ ಒರತೆ ಒದಗಿಸುತ್ತದೆ. ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಎಲ್ಲರೂ ಮಳೆಗಾಗಿ ಪ್ರಾರ್ಥಿಸಬೇಕಾಗಿದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಮೇ 21ರಂದು ನಂದಾವರದ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದಲ್ಲಿ ನಡೆದ ಶೀಘ್ರ ಮಳೆ ಪ್ರಾಪ್ತಿಗೆ ವರುಣ ದೇವನ ಕೃಪೆಗಾಗಿ ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳ ಅಭಿಷೇಕ ಮಾಡಿ ಆಶೀರ್ವಚನ ನೀಡಿದರು.

ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ. ಭಂಡಾರಿ, ಜಿಲ್ಲಾ ಪಂಚಾಯತಿ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ, ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಸುದರ್ಶನ ಜೈನ್‌, ಸಜೀಪಮೂಡ ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಪ್ರಧಾನ ಅರ್ಚಕ ವೇ|ಮೂ| ಮಹೇಶ್‌ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಭಾಕರ ಶೆಟ್ಟಿ, ಎಸ್‌. ಗಂಗಾಧರ ಭಟ್, ಎಸ್‌.ಎಂ. ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ರಮಾ ಎಸ್‌. ಭಂಡಾರಿ, ಸೀತಾರಾಮ ಶೆಟ್ಟಿ ಕಾಂತಡಿ, ಅಂಕದಕೋಡಿ ಬಾಳಿಕೆ ಆನಂದ ರೈ, ಯಶೋಧರ ರೈ ಮಾಡಂತಾಡಿ ಗುತ್ತು, ದಳಂದಿಲ ಮನೋಜ್‌ ಆಳ್ವ, ಬರಂಗರೆ ಚಂದ್ರಶೇಖರ್‌ ನಾಯ್ಕ, ಚಂದ್ರಸೇಖರ ಗಟ್ಟಿ ಅಂದಾಡಿ, ರಾಜಣ್ಣ ನಂದಾವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here