Home ಧಾರ್ಮಿಕ ಸುದ್ದಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಗೆ ದೇವಾಡಿಗ ಸಮಾಜದಿಂದ ಷಷ್ಠಿರಥ ಸಮರ್ಪಣೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಗೆ ದೇವಾಡಿಗ ಸಮಾಜದಿಂದ ಷಷ್ಠಿರಥ ಸಮರ್ಪಣೆ

346
0
SHARE

ಬಂಟ್ವಾಳ : ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಗೆ ಸಮಸ್ತ ದೇವಾಡಿಗ ಸಮಾಜದ ವತಿಯಿಂದ ಪೊಳಲಿ ಕ್ಷೇತ್ರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ನೂತನ ಷಷ್ಠಿರಥವನ್ನು ಸಮರ್ಪಿಸಲಾಯಿತು.

ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣ ಸಮಿತಿಯ ಮೂಲಕ ಬೆಳಗ್ಗೆ 11ರ ಶುಭ ಮುಹೂರ್ತದಲ್ಲಿ ಷಷ್ಠಿರಥ ಸಮರ್ಪಣೆಗೊಂಡು ರಥೋತ್ಸವ ನಡೆಯಿತು. ವೇ|ಮೂ| ಪೊಳಲಿ ಸುಬ್ರಹ್ಮಣ್ಯ ತಂತ್ರಿ, ಕ್ಷೇತ್ರದ ಪವಿತ್ರಪಾಣಿ ಪೊಳಲಿ ಮಾಧವ ಭಟ್‌ ಹಾಗೂ ಕ್ಷೇತ್ರದ ಅರ್ಚಕರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರಗಿತು.

ಬೆಳಗ್ಗೆ ಷಷ್ಠಿರಥ ಸಮರ್ಪಣ ಕಾರ್ಯಕ್ರಮವನ್ನು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಉದ್ಘಾಟಿಸಿದರು. ಷಷ್ಠಿರಥ ಸಮರ್ಪಣ ಸಮಿತಿಯ ಗೌರವಾಧ್ಯಕ್ಷ ಗೋಪಾಲ ಎಂ. ಮೊಲಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಉಳಿಪ್ಪಾಡಿಗುತ್ತು ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌, ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ಡಾ| ದೇವರಾಜ್‌ ಕೆ., ನಿಕಟಪೂರ್ವ ಅಧ್ಯಕ್ಷ ವಾಮನ ಮರೋಳಿ, ವೈದ್ಯ ಡಾ| ಕೆ.ವಿ. ದೇವಾಡಿಗ, ಪೊಳಲಿ ಸಿಎ ಬ್ಯಾಂಕ್‌ ಉಪಾಧ್ಯಕ್ಷ ಪೊಳಲಿ ವೆಂಕಟೇಶ ನಾವಡ, ಕದ್ರಿ ಕ್ಷೇತ್ರದ ಟ್ರಸ್ಟಿ ದಿನೇಶ್‌ ದೇವಾಡಿಗ ಕದ್ರಿ, ಮಂಗಳಾ ವಿದ್ಯಾಸಂಸ್ಥೆಯ ಸಂಚಾಲಕ ಡಾ| ಸುಂದರ ಮೊಲಿ, ಬೆಂಗಳೂರು ದೇವಾಡಿಗರ ಸಂಘದ ಅಧ್ಯಕ್ಷ ಕೆ. ಚಂದ್ರಶೇಖರ ದೇವಾಡಿಗ, ಮಂಗಳಾ ಸೊಸೈಟಿ ಅಧ್ಯಕ್ಷ ಕೆ.ಜೆ. ದೇವಾಡಿಗ, ಕನ್ನಡ ಮೊಯಿಲಿ ಸುಧಾರಕ ಸಂಘದ ಅಧ್ಯಕ್ಷ ಶಂಕರ ಬರ್ಕೆ, ಉಡುಪಿ ದೇವಾಡಿಗರ ಸಂಘದ ಅಧ್ಯಕ್ಷ ರತ್ನಾಕರ ದೇವಾಡಿಗ, ತಾ.ಪಂ. ಸದಸ್ಯ ಯಶವಂತ ಪೊಳಲಿ, ಕರಿಯಂಗಳ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ ದೇವಾಡಿಗ, ಹಿರಿಯಡ್ಕ ಮೋಹನದಾಸ್‌ ಮುಂಬಯಿ, ಸಮಿತಿಯ ಅಧ್ಯಕ್ಷ ರಾಮದಾಸ್‌ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಬಿ. ತುಂಬೆ, ಕೋಶಾಧಿಕಾರಿ ನಾಗೇಶ್‌ ದೇವಾಡಿಗ ಪೊಳಲಿ, ಉಪಾಧ್ಯಕ್ಷರಾದ ಭಾಸ್ಕರ ಎಂ. ಕದ್ರಿ, ಕೃಷ್ಣಪ್ಪ ದೇವಾಡಿಗ ಪೊಳಲಿ, ವಾಸು ಎಸ್‌. ದೇವಾಡಿಗ ಮುಂಬಯಿ, ಗೋಕುಲ್‌ ಕದ್ರಿ, ಕುಮಾರ್‌ ದೇವಾಡಿಗ ಪೊಳಲಿ, ಸಮಿತಿಯ ಪದಾಧಿಕಾರಿಗಳು, ಮುಂಬಯಿ, ಬೆಂಗಳೂರು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here