Home ಧಾರ್ಮಿಕ ಸುದ್ದಿ ಅಡೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿ: ಬೆಳ್ಳಿಪ್ಪಾಡಿ ಪ್ರಾದೇಶಿಕ ಸಮಿತಿ ಸಭೆ

ಅಡೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿ: ಬೆಳ್ಳಿಪ್ಪಾಡಿ ಪ್ರಾದೇಶಿಕ ಸಮಿತಿ ಸಭೆ

183
0
SHARE
ಬಿ.ಎಚ್.ಹುಕ್ರಪ್ಪ ಮಾಸ್ತರ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು

ದೇಲಂಪಾಡಿ: ಕುಂಬಳೆ ಸೀಮೆಯಲ್ಲಿ ಪ್ರಸಿದ್ಧಿವೆತ್ತ ಅಡೂರು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಭೆಯು ಬೆಳ್ಳಿಪ್ಪಾಡಿ ಶಾರದಾಂಬಾ ಭಜನಾ ಮಂದಿರದ ಸಭಾ ಭವನದಲ್ಲಿ ಬೆಳ್ಳಿಪ್ಪಾಡಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಬಿ.ಎಚ್.ಹುಕ್ರಪ್ಪ ಮಾಸ್ತರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಡೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಎಂ. ಪ್ರಭಾಕರ ನಾೖಕ್‌ ಅವರು ಮೇಘ ಬಂಪರ್‌ ನಿಧಿಯ ಕೂಪನ್‌ ಪುಸ್ತಕವನ್ನು ಪ್ರಾದೇಶಿಕ ಸಮಿತಿಗೆ ಹಸ್ತಾಂತರಿಸಿದರು.

ಕೂಪನ್‌ ಪುಸ್ತಕ ವಿತರಣೆಯ ವಿಧಿವಿಧಾನ ಬಗ್ಗೆ ಪೆರಿಯಡ್ಕ ಚಂದ್ರಶೇಖರ ರಾವ್‌, ಎಂ. ಕೃಷ್ಣಪ್ಪ ಮಾಸ್ತರ್‌, ಜೀರ್ಣೋದ್ಧಾರ ಸಮಿತಿಯ ಚಟುವಟಿಕೆಯ ಬಗ್ಗೆ ಕೇಂದ್ರ ಸಮಿತಿ ಸದಸ್ಯ ಬೆಳ್ಳಿಪ್ಪಾಡಿ ಸದಾಶಿವ ರೈ ಅವರು ಮಾತನಾಡಿ ತಿಳಿಯಪಡಿಸಿದರು.

ಕೇಂದ್ರ ಸಮಿತಿಯ ಸದಸ್ಯ ಎ. ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ಶಾರದಾಂಬಾ ಭಜನ ಮಂದಿರದ ಗೌರವಾಧ್ಯಕ್ಷ ಕೋಟಿಗದ್ದೆ ಜನಾರ್ದನ ನಾಯಕ್‌, ಬೆಳ್ಳಿಪ್ಪಾಡಿ ಸದಾನಂದ ರೈ, ಬಾಳೆಕೋಡಿ ತೇಜಕುಮಾರ್‌ ಹಳೆಮನೆ, ಧನಂಜಯ ಕುಮಾರ್‌ ವಿವಿಧ ಸಲಹೆ ಸೂಚನೆ ನೀಡಿದರು. ವಿವಿಧ ಮಹಿಳಾ ಸಂಘಟನೆಗಳ ಸದಸ್ಯೆಯರು ಉಪಸ್ಥಿತರಿದ್ದರು. ಬೆಳ್ಳಿಪ್ಪಾಡಿ ತೋಟ ಚಂದ್ರಶೇಖರ ಗೌಡ ಸ್ವಾಗತಿಸಿದರು. ಬೆಳ್ಳಿಪ್ಪಾಡಿ ತೋಟ ಶಿವರಾಮ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here