Home ಧಾರ್ಮಿಕ ಸುದ್ದಿ ಬಂಟಕಲ್ಲು: ನಾಗಬ್ರಹ್ಮಸ್ಥಾನ ಪುನಃಪ್ರತಿಷ್ಠೆ , ಬ್ರಹ್ಮಕಲಶ

ಬಂಟಕಲ್ಲು: ನಾಗಬ್ರಹ್ಮಸ್ಥಾನ ಪುನಃಪ್ರತಿಷ್ಠೆ , ಬ್ರಹ್ಮಕಲಶ

1129
0
SHARE

ಶಿರ್ವ: ನಾಗಬ್ರಹ್ಮಸ್ಥಾನ ಜೀರ್ಣೋದ್ಧಾರ ಸಮಿತಿ ಮಾನಿಪಾಡಿ-ಬಂಟಕಲ್ಲು ಇದರ ವತಿಯಿಂದ ಕಟಪಾಡಿ ಗೋಪಾಲಕೃಷ್ಣ ನಾಯಕ್‌ ಅವರ ಸ್ಥಳದಲ್ಲಿ ಗುರುವಾರ ನಾಗದೇವರ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶ, ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

ಬಂಟಕಲ್ಲು ಶ್ರೀಕ್ಷೇತ್ರದ ಹಿರಿಯ ವೈದಿಕ ವೇ|ಮೂ| ಕೆ. ವೇದವ್ಯಾಸರಾಯ ಭಟ್ ಅವರ ಮಾರ್ಗದರ್ಶನದಲ್ಲಿ ಇರ್ವತ್ತೂರು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ತಂತ್ರಿ ವೇ|ಮೂ| ಅಂಡಾರು ವಿಶ್ವನಾಥ ತಂತ್ರಿಗಳ ನೇತೃತ್ವ, ಮತ್ತು ಸ್ಥಳೀಯ ವೈದಿಕರ ಸಹಭಾಗಿತ್ವದಲ್ಲಿ ಧಾರ್ಮಿಕ ಪೂಜಾವಿಧಿ, ಕಾರ್ಯಗಳು ನಡೆದು ಉಡುಪಿ ಗುಂಡಿಬೈಲು ನಾಗಪಾತ್ರಿ ವಾಸುದೇವ ಪೈ ಅವರಿಂದ ನಾಗ ಸಂದರ್ಶನದೊಂದಿಗೆ ಪಲ್ಲಪೂಜೆ,ಅನ್ನ ಸಂತರ್ಪಣೆ ಸಂಪನ್ನಗೊಂಡಿತು.

ಪೂರ್ವಭಾವಿಯಾಗಿ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆದು ಜ. 9ರಂದು ಪೂರ್ವಾಹ್ನ ವೈದಿಕ ಅನುಷ್ಠಾನ, ವಿವಿಧ ಹೋಮ, ಹವನಾದಿಗಳು ನಡೆದಿದ್ದವು.

ಕಾರ್ಯಕ್ರಮದಲ್ಲಿ ಬಂಟಕಲ್ಲು ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here