Home ಧಾರ್ಮಿಕ ಸುದ್ದಿ ಬಂಟಕಲ್ಲು : ದೇಗುಲದ ಸಾನ್ನಿಧ್ಯ ಸಂಕೋಚ ಸಂಪನ್ನ

ಬಂಟಕಲ್ಲು : ದೇಗುಲದ ಸಾನ್ನಿಧ್ಯ ಸಂಕೋಚ ಸಂಪನ್ನ

1327
0
SHARE

ಶಿರ್ವ: ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕಾರ್ಯ ನೆರವೇರಲಿದ್ದು ಸಮಸ್ತ ಸಾರಸ್ವತ ಮಠಪರಂಪರೆಯ ಆದ್ಯ ಗುರುಪೀಠ ಗೋವಾ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್‌ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ಅವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವೇ|ಮೂ| ಗೋವಾ ಕಾಳಿದಾಸ್‌ ಸಾವೈಕರ್‌ ಮತ್ತು ವೇ|ಮೂ| ಪುತ್ತೂರು ಬಾಲಕೃಷ್ಣ ಭಟ್‌ ಮುಂದಾಳತ್ವದಲ್ಲಿ ಕ್ಷೇತ್ರದ ಹಾಗೂ ಸಮಾಜದ ವೈದಿಕರ ಸಹಭಾಗಿತ್ವದಲ್ಲಿ ಧಾರ್ಮಿಕ ಅನುಷ್ಠಾನಗಳು ಗುರುವಾರ ಸಂಪನ್ನಗೊಂಡವು.

ಶ್ರೀಗಳವರ ಉಪಸ್ಥಿತಿಯಲ್ಲಿ ವೇ|ಮೂ| ಪುತ್ತೂರು ಬಾಲಕೃಷ್ಣ ಭಟ್‌ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್‌, ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು,ಉಪಾಧ್ಯಕ್ಷ ಉಮೇಶ್‌ ಪ್ರಭು ಪಾಲಮೆ, ಶ್ರೀ ದೇಗುಲದ ಆಡಳಿತ ಮಂಡಳಿ ಸದಸ್ಯರು, ಶ್ರೀಮಠದ ವೈದಿಕರು, ಶ್ರೀ ಕ್ಷೇತ್ರದ ಕುಲಾವಿಗಳು,ಭಜಕವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here