Home ಧಾರ್ಮಿಕ ಕಾರ್ಯಕ್ರಮ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇಗುಲ: ದೀಪೋತ್ಸವ ಸಂಪನ್ನ

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇಗುಲ: ದೀಪೋತ್ಸವ ಸಂಪನ್ನ

1609
0
SHARE

ಶಿರ್ವ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಆರಾಧ್ಯಮಾತೆ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಶಿಲಾಮಯ ತಾಮ್ರ ಆಚ್ಛಾದಿತ ಗರ್ಭಗೃಹದಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮ, ಸಪರಿವಾರ ಗಣಪತಿ, ಸುಬ್ರಹ್ಮಣ್ಯ ದೇವರ ಅಷ್ಟಬಂಧ ಪುನಃಪ್ರತಿಷ್ಠೆ , ಸಹಸ್ರ ಕುಂಭಾಭಿಷೇಕ ನಡೆದು ಶಿಲಾಮಯ ದೇಗುಲದಲ್ಲಿ ವರ್ಷಾವಧಿ ರಥೋತ್ಸವ, ದೀಪೋತ್ಸವ, ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಸಂಪನ್ನಗೊಂಡಿತು.

ಗೋವಾ ಕವಳೆ ಮಠದ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಶ್ರೀ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ ಅವರ ಉಪಸ್ಥಿತಿಯಲ್ಲಿ ಶ್ರೀದೇಗುಲದ ಅರ್ಚಕರಾದ ಸುಧೀಂದ್ರ ಭಟ್, ರಘುರಾಮ ಭಟ್, ಶ್ರೀಕಾಂತ್‌ ಭಟ್ ಹಾಗೂ ಶ್ರೀಮಠದ ವೈದಿಕರು ಶ್ರೀ ದುರ್ಗಾಪರಮೇಶ್ವರೀ ದೇವಿ ಮತ್ತು ಸಪರಿವಾರ ಗಣಪತಿ, ಸುಬ್ರಹ್ಮಣ್ಯ ದೇವತಾ ಸನ್ನಿಧಿಯಲ್ಲಿ ಪ್ರಧಾನ ಹೋಮ, ನವಕ ಕಲಶಾಭಿಷೇಕ, ವರ್ಷಾವಧಿ ರಥೋತ್ಸವ, ಬಲಿ ಉತ್ಸವ, ಬ್ರಾಹ್ಮಣ ಸಂತರ್ಪಣೆ, ಮಹಾಪೂಜೆ, ರಂಗಪೂಜೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾವ್ಯಶ್ರೀ ಅಜೇರು ಮತ್ತು ತಂಡದವರಿಂದ ಯಕ್ಷ-ಗಾನ- ವೈಭವ, ವಿದುಷಿ ಶ್ರೀವಿದ್ಯಾ ಸಂದೇಶ್‌ ಅವರ ನೃತ್ಯ ವಿದ್ಯಾನಿಕೇತನ ಬಂಟಕಲ್ಲು ಅವರಿಂದ ನೃತ್ಯ ನೂಪುರ, ರಥೋತ್ಸವದ ಬಳಿಕ ರಾತ್ರಿ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರಿಂದ ‘ಸುಧನ್ವಾರ್ಜುನ’ ಯಕ್ಷಗಾನ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್‌, ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ್‌ ವೈ. ನಾಯಕ್‌, ಪ್ರಧಾನ ಕಾರ್ಯದರ್ಶಿ ಸಡಂಬೈಲು ಶಶಿಧರ ವಾಗ್ಲೆ, ಕೋಶಾಧಿಕಾರಿ ಸುರೇಶ್‌ ಕೆ. ಪ್ರಭು, ರಾಜಾಪುರ ಸಾರಸ್ವತ ಯುವ ವೃಂದದ ಗೌರವಾಧ್ಯಕ್ಷ ಕೆ.ಆರ್‌. ಪಾಟ್ಕರ್‌, ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ವೃಂದದ ಸದಸ್ಯೆಯರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಬಂಟಕಲ್ಲು ಪೇಟೆ ಸ್ವಚ್ಛತಾ ಕಾರ್ಯ
ದೇವಸ್ಥಾನದ ಧಾರ್ಮಿಕ, ಸಾಂಸ್ಕೃತಿಕ ಸಮಾಪನಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬಂಟಕಲ್ಲು ಪೇಟೆ, ದೇವಸ್ಥಾನದ ಪರಿಸರದ ಸ್ವಚ್ಛತಾ ಕಾರ್ಯಕ್ರಮವು ಶಿರ್ವ ಗ್ರಾ.ಪಂ. ಸದಸ್ಯ ಕೆ.ಆರ್‌. ಪಾಟ್ಕರ್‌ ಅವರ ನೇತೃತ್ವದಲ್ಲಿ ಗ್ರಾ.ಪಂ. ಸಹಕಾರದೊಂದಿಗೆ ನಡೆಯಿತು. ಪೇಟೆ, ದೇವಸ್ಥಾನದ ಸುತ್ತಮುತ್ತಹಾಕಿದ್ದ ಬ್ಯಾನರ್, ಬಂಟಿಂಗ್ಸ್‌, ಪತಾಕೆ ಮತ್ತು ಕಸಕಡ್ಡಿಗಳನ್ನು ಸ್ವಯಂಸೇವಕರು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

LEAVE A REPLY

Please enter your comment!
Please enter your name here