ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ನ. 12ರಂದು ನಡೆಯಲಿರುವ ರುದ್ರಾಯಾಗದ ಆಮಂತ್ರಣ ಪತ್ರಿಕೆಯ ಬಿಡುಗಡೆಯ ಸಮಾರಂಭವು ಆ. 11 ರಂದು ದೇವಸ್ಥಾನದಲ್ಲಿ ನಡೆಯಿತು. ದೇವಳದ ಪ್ರಧಾನ ತಂತ್ರಿ ಶಶಿಕಾಂತ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಮಾಧವ ಬನ್ನಂಜೆ, ದೇವಳದ ಅರ್ಚಕ ವಾಸುದೇವ ಉಪಾಧ್ಯ, ಟ್ರಸ್ಟಿಗಳಾದ ದಿನೇಶ್ ಪುತ್ರನ್ ಬನ್ನಂಜೆ, ಪ್ರಭಾಕರ್ ಶೆಟ್ಟಿ ಬನ್ನಂಜೆ, ಸತೀಶ್ ಭಂಡಾರಿ ಬನ್ನಂಜೆ, ಸಂದೇಶ್ ಶೇಟ್ಅರುಂಧತಿ ಸುರೇಶ್ ಶೆಟ್ಟಿ ಬನ್ನಂಜೆ, ವಿದ್ಯಾಲತಾ ಯು. ಶೆಟ್ಟಿ ಬನ್ನಂಜೆ, ನಿತ್ಯಾನಂದ ಬನ್ನಂಜೆ, ಕಿಶನ್ ಹೆಗ್ಡೆ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕೃಷ್ಣಪ್ಪ ಪೂಜಾರಿ, ಹರೀಶ್ ಸಾಲ್ಯಾನ್, ವಿಶ್ವನಾಥ್ ಕೊಡವೂರು ಉಪಸ್ಥಿತರಿದ್ದರು.